Recent Posts

Tuesday, January 21, 2025
ರಾಜಕೀಯ

ದೋಸ್ತಿ ಸರ್ಕಾರ ಪತನದಿಂದ ಬೇಸರ, ರಾಜಕೀಯ ನಿವೃತ್ತಿಯ ಬಗ್ಗೆ ಮಾತನ್ನಾಡಿದ ಎಚ್ ಡಿ ಕುಮಾರಸ್ವಾಮಿ – ಕಹಳೆ ನ್ಯೂಸ್

ಹಾಸನ: ದೋಸ್ತಿ ಸರ್ಕಾರ ಪತನದಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನ್ನಾಡಿದ್ದಾರೆ.

ಇಂದು ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ನನಗೆ ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಂಬಲವೂ ಇಲ್ಲ. ರಾಜಕೀಯದಿಂದ ನಾನೇ ಹಿಂದಕ್ಕೆ ಸರಿಯಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆದೆ ದೇವರು ಕೊಟ್ಟ ಆಶೀರ್ವಾದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳ ಬಗ್ಗೆ ತೃಪ್ತಿ ಇದೆ. ರಾಜಕೀಯದಲ್ಲಿ ನಾನೇನು ಗೂಟ ಹೊಡೆದುಕೊಂಡು ಕೂರುವುದಿಲ್ಲ. ಈ ಹಿಂದೆಯೇ ರಾಜಕೀಯದಿಂದ ನಿವೃತ್ತಿಯಾಗಿವ ಚಿಂತನೆ ಮಾಡಿದ್ದೆ ಎಂದು ಮತ್ತೆ ಇಂದು ಸಹ ಮತ್ತೆ ರಾಜಕೀಯದ ನಿವೃತ್ತಿ ಬಗ್ಗೆ ರಿಪಿಟ್ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು