Monday, January 20, 2025
ಸುದ್ದಿ

ಬಿಎಟಿ ಸೈನಿಕರ ಡೆಡ್ ಬಾಡಿ ತೆಗೆದುಕೊಳ್ಳಿ: ಪಾಕ್ ಗೆ ಭಾರತೀಯ ಸೇನೆ ದಿಟ್ಟ ಉತ್ತರ – ಕಹಳೆ ನ್ಯೂಸ್

ನವದೆಹಲಿ: ಗಡಿಯೊಳಗೆ ನುಸುಳುತ್ತಿದ್ದ ಪಾಕಿಸ್ತಾನದ ಉಗ್ರರು ಹಾಗೂ ಬಿಎಟಿ ಸೈನಿಕರ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಬಿಳಿ ಧ್ವಜದೊಂದಿಗೆ ನಿಮ್ಮ ಸೈನಿಕರ ಮೃತದೇಹಳಗಳನ್ನು ತೆಗೆದುಕೊಂಡು ಹೋಗಿ ಎಂದು ಭಾರತೀಯ ಸೇನೆ ಹೇಳಿದೆ. ಆದರೆ, ಇದಕ್ಕೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು- ಕಾಶ್ಮೀರದ ಕೇರಾನ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಐದಾರು ಮಂದಿ ಪಾಕಿಸ್ತಾನದ ಬಿಎಟಿ ಸೈನಿಕರು ಹಾಗೂ ಉಗ್ರರನ್ನು ನಿನ್ನೆ ಹತ್ಯೆ ಮಾಡಲಾಯಿತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಯಾಟ್ ಪಾಕಿಸ್ತಾನದ ಉಗ್ರರು ಹಾಗೂ ಸೈನಿಕರನ್ನೊಳಗೊಂಡ ವಿಶೇಷ ತಂಡವಾಗಿದೆ. ಈ ತಂಡ ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಹಾಗೂ ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುತಿತ್ತು ಎಂದು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಹೇಳಿದ್ದಾರೆ.