Monday, January 20, 2025
ಸುದ್ದಿ

ಶಾಸಕಿ ರೂಪಾಲಿ ನಾಯ್ಕ ಮನವಿಗೆ ಸ್ಪಂದಿಸಿದ ಸಿಎಂ – ಕಹಳೆ ನ್ಯೂಸ್

ಕಾರವಾರ : ಉತ್ತರಕನ್ನಡ ಜಿಲ್ಲೆಯ ಮಾಜಾಳಿಯ ದೇವಭಾಗ ಗ್ರಾಮದಲ್ಲಿ ಕಳೆದ ಅನೇಕ ದಿನಗಳಿಂದ ಸಮುದ್ರದ ರಕ್ಕಸ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜನರ ಸಮಸ್ಯೆಯನ್ನ ಅರಿತ ಕಾರವಾರ ಶಾಸಕಿ ರೂಪಾಲಿ ನಾಯ್ಕ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಮುದ್ರಕೊರೆತದಿಂದ ಅಲ್ಲಿನ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಿಎಂ ಅವರ ಗಮನಕ್ಕೆ ತಂದು, ತಡೆಗೋಡೆ ದುರಸ್ಥಿ ಮಾಡುವಂತೆ ಮನವಿ ನೀಡಿದ್ದರು. ತಕ್ಷಣ ಮನವಿಗೆ ಸ್ಪಂಧಿಸಿ ಸಿಎಂ ಯಡಿಯೂರಪ್ಪ ಅವರು ದೇವಭಾಗದಲ್ಲಿ ಸಮುದ್ರಕೊರೆತದಿಂದ ತಡೆಗೋಡೆ ನಿರ್ಮಾಣದ ಬಗ್ಗೆ ತಕ್ಷಣ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು