Monday, January 20, 2025
ಸುದ್ದಿ

ಫಿಲೋಮಿನಾದಲ್ಲಿ ಯೂತ್ ರೆಡ್ ಕ್ರಾಸ್ ಕುರಿತು ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ಮನಸ್ಸಿನಲ್ಲಿರುವ ಋಣಾತ್ಮಕ ಅಂಶಗಳನ್ನು ತ್ಯಜಿಸಿ, ಧನಾತ್ಮಕತೆಯನ್ನು ಜೀವನ ಪರ್ಯಂತ ಅಳವಡಿಸಿಕೊಂಡಾಗ ಸಾಮಾಜದಲ್ಲಿ ಮಹತ್ತರ ಬದಲಾವಣೆ ನಿರ್ಮಾಣವಾಗಬಲ್ಲುದು ಎಂದು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನಕರ ಅಂಚನ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಯೂತ್ ರೆಡ್ ಕ್ರಾಸ್ ಸೊಸೈಟಿ ಸ್ಪಂದನ ಸಭಾಭವನದಲ್ಲಿ ಸೊಸೈಟಿಯ ಸದಸ್ಯರಿಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ಮಾನವನಾದವನಿಗೆ ಬದುಕುವ ಹಕ್ಕು ಎಷ್ಟು ಮುಖ್ಯವೋ, ಹೊಣೆಗಾರಿಕೆಯೂ ಅಷ್ಟೇ ಮುಖ್ಯ. ಇಂದಿನ ಸಮಾಜದಲ್ಲಿ ಯುವ ಜನತೆ ತಮ್ಮ ಜವಾಬ್ದಾರಿಯನ್ನು ಮರೆತಂತೆ ಭಾಸವಾಗುತ್ತಿದೆ. ರೆಡ್ ಕ್ರಾಸ್‍ನ ಪ್ರಮುಖ ಉದ್ದೇಶಗಳಾದ ಆರೋಗ್ಯ ರಕ್ಷಣೆ, ಮಾನವೀಯ ಸ್ಪಂದನೆ, ಯುವ ಒಗ್ಗೂಡುವಿಕೆ, ಸದ್ಭಾವನೆ ಮೊದಲಾದುವುಗಳನ್ನು ಪಾಲಿಸಲು ದೃಢಸಂಕಲ್ಪವನ್ನು ಹೊಂದಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ದ್ವಿತೀಯ ಮಹಾ ಯುದ್ಧದ ಸಂದರ್ಭದಲ್ಲಿ ಕಷ್ಟ ನಷ್ಟಕ್ಕೊಳಗಾದ ಅಮಾಯಕ ಜನರನ್ನು ರಕ್ಷಿಸುವ ಸದುದ್ದೇಶದಿಂದ ಪ್ರಾರಂಭಗೊಂಡ ರೆಡ್ ಕ್ರಾಸ್ ಸೊಸೈಟಿ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವುದು ಸಂತಸದ ಸಂಗತಿ. ಅಫಘಾತದಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯ ಗುಣಗಳನ್ನು ಎತ್ತಿ ಹಿಡಿಯಬೇಕೇ ವಿನಹ ಮೊಬೈಲ್ ಫೋನ್ ಬಳಸಿ, ಭಾವಚಿತ್ರಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪಸರಿಸುವುದರಲ್ಲಿ ಆಸಕ್ತಿ ವಹಿಸುವುದು ಸಮಂಜಸವಲ್ಲ. ನಾವು ಮಾಡುವ ಕೆಲಸಗಳು ಇತರರಿಗೆ ಪ್ರೇರಣೆಯನ್ನು ನೀಡುವಂತಿರಬೇಕು ಎಂದರು.

ಯೂತ್ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕಿ ವೆಂಕಟೇಶ್ವರಿ ಕೆ ಎಸ್ ಮತ್ತು ಸಹ ನಿರ್ದೇಶಕ ನೀಲೇಶ್ ಜೋಯ್ ಡಾಯಸ್ ಉಪಸ್ಥಿತರಿದ್ದರು.

ರಂಜಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಯೂತ್ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಶೇಕ್ ಮಹಮ್ಮದ್ ಫಾಯಿಝ್ ಸ್ವಾಗತಿಸಿ, ಉಪಾಧ್ಯಕ್ಷ ಸ್ಟೆಲನ್ ಡಿ’ಸೋಜ ವಂದಿಸಿದರು. ಋತು ಕಿರಣ್ ಕಾರ್ಯಕ್ರಮ ನಿರೂಪಿಸಿದರು.