Thursday, January 23, 2025
ಸುದ್ದಿ

ಬಿ.ಸಿ.ರೋಡಿನ ದೇವಾಲಯಗಳಲ್ಲಿ ನಾಗ ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು- ಕಹಳೆ ನ್ಯೂಸ್

ಬಂಟ್ವಾಳ: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬ. ನಾಗ ದೇವರಿಗೆ ಹಾಲು ಎರೆಯುವ ಆಚರಣೆ ತುಂಬಾ ಪ್ರಸಿದ್ಧಿಯಾಗಿದೆ. ಹೀಗಾಗಿ ಇಂದು ಎಲ್ಲಾ ದೇವಸ್ಥಾನಗಳಲ್ಲೂ ಜನ ಜಂಗುಳಿಯಿಂದ ಕೂಡಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಪ್ರಮುಖ ಕೇಂದ್ರ ಭಾಗದಲ್ಲಿರುವ ದೇವಾಲಯಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲೆರೆದು, ಸೀಯಾಳಭಿಷೇಕ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಸಿರೋಡಿನಲ್ಲಿರುವ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ, ಶ್ರೀ ರಕ್ತೇಶ್ವರಿ ದೇವಸ್ಥಾನ, ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ನಾಗನಿಗೆ ಅಭಿಷೇಕ ಕಾರ್ಯ ನಡೆಯುತ್ತಿದ್ದು, ನಾಗನಿಗೆ ಊರ ಪರ ಊರ ಭಕ್ತರು ತನು ತಂಬಿಲ ಸೇವೆ ನೀಡಿದರು.