ಮಂಗಳೂರು: ಮಂಗಳೂರು-ದೆಹಲಿ ಮಧ್ಯೆ ಭಾನುವಾರದಿಂದ ನೇರ ವಿಮಾನಯಾನ ಪುನಃ ಆರಂಭಗೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್ ಅವರು ಪ್ರಯಾಣಿಕರೊಬ್ಬರಿಗೆ ಬೋಡಿರ್ಂಗ್ ಪಾಸ್ನ್ನು ಹಸ್ತಾಂತರಿಸುವ ಮೂಲಕ ಮೊದಲ ದೆಹಲಿ ನೇರ ವಿಮಾನಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಸ್ಪೈಸ್ ಜೆಟ್ ಪ್ರಾದೇಶಿಕ ವ್ಯವಸ್ಥಾಪಕ ನವಲ್ ಕಿಶೋರ್, ಸ್ಪೈಷನ್ ಮೆನೇಜರ್ ಸಂತೋಷ್, ಕರ್ತವ್ಯ ಅಧಿಕಾರಿ ಆಶಿತ್ರಾಜ್ ಇದ್ದರು. ಈ ಸ್ಪೈಸ್ಜೆಟ್ ಪ್ರತಿದಿನ ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಹೊರಟು 8.55ಕ್ಕೆ ದೆಹಲಿ ತಲುಪಲಿದೆ.
ದೆಹಲಿಯಿಂದ ರಾತ್ರಿ 8.55ಕ್ಕೆ ಹೊರಟು 11.25ಕ್ಕೆ ಮಂಗಳೂರು ತಲುಪಲಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನ ಯಾನ ಸೇವೆ ಇದ್ದರೂ ಬಳಿಕ ಅದು ಸ್ಥಗಿತಗೊಂಡಿತ್ತು.