Thursday, January 23, 2025
ಸುದ್ದಿ

ಸುಬ್ರಹ್ಮಣ್ಯ ಯಾತ್ರಾ ಸ್ಥಳದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಯುವಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರು- ಕಹಳೆ ನ್ಯೂಸ್

ಸುಬ್ರಹ್ಮಣ್ಯ; ಕುಕ್ಕೇ ಸುಬ್ರಹ್ಮಣ್ಯ ಯಾತ್ರಾ ಸ್ಥಳಕ್ಕೆ ಬೇರೆ ಬೇರೆ ಊರಿನಿಂದ, ಅದೆಷ್ಟೋ ಯಾತ್ರಿಕರು ಬರುತ್ತಾರೆ. ಕಸದ ಬುಟ್ಟಿ ಇದ್ದರು ಎಲ್ಲೆಂದರಲ್ಲಿ ಕಸ ಬಿಸಾಕುವುದು, ಉಟ್ಟ ಬಟ್ಟೆಯನ್ನು ಕ್ಷೇತ್ರದಲ್ಲಿ ಬಿಸಾಕುವುದು, ತಮ್ಮ ಮನೆಯಲ್ಲಿ ಇದ್ದ ಹಳೆಯ ಫೋಟೋಗಳನ್ನೂ ಬಿಸಾಡುವುದು, ಇನ್ನೂ ನೀರು ಕುಡಿದು ಬಾಟಲ್‍ಗಳನ್ನೂ ಇದ್ದಬದ್ದಲ್ಲಿ ಎಸೆಯುವುದು, ದಿನನಿತ್ಯ ಲೋಡುಗಟ್ಟಲೆ ಕಸವನ್ನು ಕುಕ್ಕೇ ಸುಬ್ರಹ್ಮಣ್ಯ ಪರಿಸರದಲ್ಲಿ ಎಸೆದುಬಿಡುತ್ತಾರೆ. ಇದರಿಂದಾಗಿ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರ ಮಾಲಿನ್ಯಗೊಳ್ಳುತ್ತಿದೆ. 

ಇದನ್ನು ಮನಗಂಡ ಚಕ್ರವರ್ತಿ ಸೂಲಿಬೆಲೆ ಇವರ ಮಾರ್ಗದರ್ಶನದಲ್ಲಿ ಯುವಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರು ಪ್ರತಿ ಭಾನುವಾರದಂದು ಕುಕ್ಕೇ ಸುಬ್ರಹ್ಮಣ್ಯ ಸ್ನಾನ ಘಟ್ಟ, ರಥಬೀದಿ, ವಾಹನ ಪಾಕಿರ್ಂಗ್, ಬಸ್ ನಿಲ್ದಾಣ, ಕುಮಾರಧಾರದಿಂದ ದೇವಸ್ಥಾನವರೆಗಿನ ರಸ್ತೆ ಸ್ವಚ್ಛ ಮಾಡುವ ಮಹಾಕಾರ್ಯ ಮಾಡುತಿದ್ದಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೊದಲು ಚಕ್ರವರ್ತಿ ಸೂಲಿಬೆಲೆ ಪ್ರಾರಂಭಿಸಿದ ಸ್ವಚ್ಛತಾ ಕಾರ್ಯಕ್ರಮದ ನಂತರ ಸುಬ್ರಹ್ಮಣ್ಯದ ಯುವಕರಾದ ರಮೇಶ್, ಸೂರ್ಯ, ರತನ್, ಸಂದೀಪ್, ಕಾರ್ತಿಕ್, ರಾಮಚಂದ್ರ, ಯಶೋಧರ, ದೇವಿಪ್ರಸಾದ್ ಹಾಗೂ ಉಳಿದ ಎಲ್ಲಾ ಸದಸ್ಯರು ಉತ್ಸಾಹದಿಂದ ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಕನಸಿಗೆ ಬೆಂಬಲಿಸಿ, ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಮಾಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸ ಮಾಡಿದ ಈ ಯುವಕರ ತಂಡ ಊರಿನ ಹಾಗೂ ಕುಕ್ಕೆಗೆ ಬರುವ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು