Friday, January 24, 2025
ಸುದ್ದಿ

ಕೋಡಿಂಬಾಳ ಮತ್ತು ಪಿಜಕ್ಕಳ ಗ್ರಾಮದಲ್ಲಿ ವೃಕ್ಷರೋಪಣ ಕಾರ್ಯಕ್ರಮ – ಕಹಳೆ ನ್ಯೂಸ್

ಕಡಬ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮತ್ತು ಸರಸ್ವತೀ ವಿದ್ಯಾಲಯ ವಿದ್ಯಾನಗರ ಕಡಬ ಹಾಗೂ ಗ್ರಾಮ ವಿಕಾಸ ಸಮಿತಿ ಕೋಡಿಂಬಾಳ, ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋಡಿಂಬಾಳ ಮತ್ತು ಪಿಜಕ್ಕಳ ಗ್ರಾಮದಲ್ಲಿ ವೃಕ್ಷರೋಪಣ ಕಾರ್ಯಕ್ರಮವು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಸ್ವತೀ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ಲಿಂಗಪ್ಪ ಜೆ ಉದ್ಘಾಟಿಸಿರು. ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದೆಂದು ಹೇಳಿದರು. ಉಮೇಶ್ ಶೆಟ್ಟಿ ಸಾಯಿರಾಂ ನಿರ್ದೇಶಕರು ಸರಸ್ವತೀ ಸಮೂಹ ಸಂಸ್ಥೆ ಕಡಬ ಇವರು ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ದೇಶದ ಪ್ರತಿಯೊಬ್ಬ ಪ್ರಜೆಯು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಸಹಶಿಕ್ಷಕ ಗಿರೀಶ್ ಗೌಡ ಸಿ ಸ್ವಾಗತಿಸಿ, ಮುಖ್ಯ ಮಾಧವ ಕೆ ವಂದಿಸಿ, ಸಹಶಿಕ್ಷಕ ವಸಂತ್ ಕೆ ಕಾರ್ಯಕ್ರಮ ನಿರೂಪಿಸಿದರು.