Friday, January 24, 2025
ಸುದ್ದಿ

ಜಮ್ಮು- ಕಾಶ್ಮೀರ ಜನರ ನಂಬಿಕೆಗೆ ದ್ರೋಹ : ಒಮರ್ ಅಬ್ದುಲ್ಲಾ-ಕಹಳೆ ನ್ಯೂಸ್

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಪಡಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮ ಆಘಾತಕಾರಿಯಾಗಿದೆ ಎಂದಿರುವ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದು ಜಮ್ಮು- ಕಾಶ್ಮೀರದ ಜನರ ನಂಬಿಕೆಗೆ ಬಗೆದ ದ್ರೋಹ ಎಂದು ಟೀಕಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370 ಅನ್ವಯವಾಗದ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ಮಂಡಿಸುವ ಮೂಲಕ ಕೇಂದ್ರ ಸರ್ಕಾರ ಇಂದು ಆಘಾತಕಾರಿ ಹಾಗೂ ಏಕಮುಖಿಯಾದಂತಹ ನಿರ್ಣಯ ಕೈಗೊಂಡಿದೆ. 1947ರಲ್ಲಿ ಆದ ಒಪ್ಪಂದದ ಪ್ರಕಾರ ಭಾರತಕ್ಕೆ ಸೇರಿಸಿಕೊಂಡಿದ್ದ ಜಮ್ಮು-ಕಾಶ್ಮೀರದ ಜನತೆ ಇಟ್ಟುಕೊಂಡಿದ್ದ ನಂಬಿಕೆಗೆ ದ್ರೋಹ ಬಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿರ್ಧಾರದಿಂದ ಅಪಾಯಕಾರಿ ಘಟನೆಗಳಾಗಿವೆ. ಶ್ರೀನಗರದಲ್ಲಿ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದ ವಿರುದ್ಧ ಜಮ್ಮು-ಕಾಶ್ಮೀರದ ಜನತೆ ಮೇಲೆ ಆಕ್ರಮಣ ಮಾಡಲಾಗಿದೆ. ನಮ್ಮ ಕರಾಳ ಆತಂಕಗಳು ನಿಜವಾಗಿವೆ. ಕಣಿವೆ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಸೇನೆಯನ್ನು ನಿಯೋಜಿಸುವ ಮೂಲಕ ಪ್ರಜಾಸತಾತ್ಮಕ ಧ್ವನಿಯನ್ನು ಅಡಗಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು