Friday, January 24, 2025
ಸುದ್ದಿ

ಕೊಡಗರನ್ನು ಮತ್ತೆ ಭಯ ಹುಟ್ಟಿಸಿದ ಮಳೆ – ಕಹಳೆ ನ್ಯೂಸ್

ಕೊಡಗು : ಕಳೆದ ವರ್ಷ ಇದೇ ತಿಂಗಳಿನಲ್ಲಿ ಕೊಡಗು ನರಕವಾಗಿ ಮಾರ್ಪಟ್ಟಿತ್ತು. ಮತ್ತದೇ ಪರಿಸ್ಥಿತಿ ಈ ಬಾರಿಯೂ ತಲೆದೂರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ಹವಾಮಾನ ಇಲಾಖೆ ಕೊಡಗಿನ ಜನತೆಗೆ ಎಚ್ಚರಿಕೆಯನ್ನು ಕೊಟ್ಟಿದೆ. ಕೊಡಗಿನಾದ್ಯಂತ ಭಾರಿ ಮಳೆಯಾಗುವ ಸೂಚನೆ ನೀಡಿದ್ದು, ಆಗಷ್ಟ್ 7ರಿಂದ 9ರ ವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಹಾಗೂ ಆ.9ರಿಂದ 10ರ ವರೆಗೆ ಮತ್ತೆ ಆರೆಂಜ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಈವರೆಗೆ ವಾಡಿಕೆಯ ಮಳೆ ಬಾರದಿದ್ದರು ಅಲ್ಲಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆಗೆ ರಸ್ತೆಗಳೆಲ್ಲ ಕುಸಿದಿದ್ದು, ಜನರಲ್ಲಿ ಭೀತಿ ಸೃಷ್ಠಿಸಿದೆ. ಕೊಡಗಿನ ಪ್ರವಾಸಿ ತಾಣ ಮಾಂದಲ್‍ಪಟ್ಟಿಯಲ್ಲಿ ಈಗಾಗಲೇ ಪ್ರವಾಸಿಗರಿಗೆ ಪ್ರವೇಶ ರದ್ದುಮಾಡಲಾಗಿದೆ. ಕಳೆದ ಬಾರಿ ಮಳೆ ಸೃಷ್ಟಿಸಿದ್ದ ಆವಾಂತ ಮತ್ತೆ ಮರುಕಳಿಸದಿರಲಿ ಎಂದು ಕೊಡಗಿನವರಲ್ಲದೇ ಇಡೀ ರಾಜ್ಯ ಅವರಿಗಾಗಿ ಪ್ರಾರ್ಥಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು