Recent Posts

Tuesday, November 26, 2024
ಸುದ್ದಿ

ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ: ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನದಿಂದ ಅನಿಶ್ಚಿತತೆಯಿಂದಿರುವ ರಾಜ್ಯಕ್ಕೆ ಸ್ಪಷ್ಟ ನಿಲುವು ಸಿಕ್ಕಿದೆ. ಯಾವುದೇ ಕಾರಣಕ್ಕೂ ಕಾಶ್ಮೀರ ಭಾರತದ ಅಂಗವೆಂದು ಇದ್ದ ಧೋರಣೆಗೆ ಸಂವಿಧಾನತ್ಮಕವಾದ ನಿಲುವು ಮತ್ತು ದೃಢವಾದ ಮುದ್ರೆ ಬಿದ್ದಿದೆ. ಇನ್ನು ಮುಂದಾದರೂ ಕಣಿವೆ ರಾಜ್ಯಗಳಲ್ಲಿ ಭಾರತೀಯತೆ ಹೆಚ್ಚಲಿ ಮತ್ತು ಹಿಂಸೆ ನಿಲ್ಲಲಿ. ಇದುವರೆಗೆ ಬಲಿದಾನವಾದ ಭಾರತೀಯ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದ್ದಾರೆ. ಮತ್ತು ಸರಕಾರದ ನಡೆಯನ್ನು ಸ್ವಾಗತಿಸಿದ್ದಾರೆ.

ಹೆಗ್ಗಡೆಯವರು ತಮ್ಮ ಹಿಂದಿನ ಕಾಶ್ಮೀರ ಪ್ರವಾಸದ ಸಂದರ್ಭವನ್ನು ನೆನಪಿಸುತ್ತಾ, ನಾವು 2017ರ ಜುಲೈ ತಿಂಗಳಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಒಂದು ವಾರ ಇದ್ದೆವು. ಅಲ್ಲಿನ ಜನಜೀವನದಲ್ಲಿ ಸ್ಥಳೀಯರು ಭಯದಿಂದ ವಾಸಿಸುತ್ತಿದ್ದರು ಮತ್ತು ಸದ್ಯ ನಡೆಯುತ್ತಿದ್ದ ಭಯೋತ್ಪಾದಕತೆಯ ಚಲನವಲನಗಳಿಂದ ಆಗಿರುವ ನಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಮುಖ್ಯವಾಗಿ ಕಾಶ್ಮೀರವನ್ನು ಭಾರತದ ಭಾಗವೆಂದು ಹೊರ ರಾಜ್ಯದವರು ಪರಿಗಣಿಸಿದ್ದರು. ಅಲ್ಲಿ ವಾಸಿಸುತ್ತಿದ್ದ ಯುವಕರಿಗೆ ಆ ಭಾವನೆ ಇರಲಿಲ್ಲ, ಆದರೆ, ಅಲ್ಲಿನ ಬಹುತೇಕ ಮಂದಿಗೆ ಇದರಿಂದ ಲಾಭವೇನು ಇರಲಿಲ್ಲ. ದೇಶ-ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು. ಅವರು ನಿರುದ್ಯೋಗದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು