Tuesday, January 28, 2025
ಸುದ್ದಿ

ಜಮ್ಮು ಕಾಶ್ಮೀರ: ಒಬ್ಬ ಸಂಸದ ಜುಬ್ಬ ಹರಿದುಕೊಂಡ ಇನ್ನೊಬ್ಬ ಸಂವಿಧಾನವನ್ನೆ ಹರಿದ – ಕಹಳೆ ನ್ಯೂಸ್

ನವದೆಹಲಿ: ಭಾರತದ ಸಂವಿಧಾನವೇ ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯ ಆಗಲಿದೆ. ಪರಿಣಾಮವಾಗಿ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಆ ರಾಜ್ಯಕ್ಕೆ ಇದ್ದ ವಿಶೇಷ ಸೌಲಭ್ಯಗಳು ಕೊನೆಯಾಗಲಿವೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಬಹುದೊಡ್ಡ ಪ್ರಹಸನವೇ ನಡೆದು ಹೋಯಿತು. ಪಿಡಿಪಿಯ ಒಬ್ಬ ಸಂಸದ ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರೆ, ಮತ್ತೊಬ್ಬರು ತಮ್ಮ ಕುರ್ತಾವನ್ನೇ ಹರಿದು ಹಾಕಿ ಆಕ್ರೋಶ ಹೊರಹಾಕಿದರು.

ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಭಾರಿ ಹುರುಪಿನಿಂದ ಇದ್ದರು. ಕಲಾಪ ಆರಂಭಕ್ಕೆ ಅಲ್ಪ ಮೊದಲು ಶಾ ಅವರು ಸದನ ಪ್ರವೇಶಿಸಿದಾಗ ಮೇಜು ಕುಟ್ಟಿ ಅವರನ್ನು ಸ್ವಾಗತಿಸಲಾಯಿತು. ಅದಕ್ಕೆ ಒಂದು ಗಂಟೆ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕ್ರಮಗಳಿಗೆ ಸಚಿವ ಸಂಪುಟವು ಒಪ್ಪಿಗೆ ಕೊಟ್ಟಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೂ ಮೀಸಲಾತಿ ವಿಸ್ತರಣೆಯ ತಿದ್ದುಪಡಿ ಮಸೂದೆಯನ್ನು ಶಾ ಅವರು ಮಂಡಿಸುವಾಗ ವಿರೋಧ ಪಕ್ಷಗಳ ಸದಸ್ಯರು ತಾಳ್ಮೆಯಿಂದ ಕುಳಿತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

370ನೇ ವಿಧಿಯ ವಿಶೇಷ ಸೌಲಭ್ಯಗಳು ಕೊನೆಯಾಗಲಿವೆ ಮತ್ತು ರಾಜ್ಯವನ್ನು ವಿಭಜಿಸಲಾಗುವುದು ಎಂದು ಶಾ ಹೇಳುತ್ತಿದ್ದಂತೆಯೇ ಕಾಂಗ್ರೆಸ್, ಟಿಎಂಸಿ, ಎಸ್‍ಪಿ, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್, ಆರ್‍ಜೆಡಿ, ಕೇರಳ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸಭಾಪತಿಯ ಪೀಠದ ಮುಂದೆ ಜಮಾಯಿಸಿ ಘೋಷಣೆ ಕೂಗಲಾರಂಭಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೀಠದ ಮುಂದೆಯೇ ಧರಣಿ ನಡೆಸುವಂತೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಸೂಚಿಸಿದರು. ಅದರಂತೆಯೇ ಹಲವು ಸದಸ್ಯರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ, ಪಿಡಿಪಿ ಸಂಸದ ಮೊಹಮ್ಮದ್ ಫಯಾಜ್ ಅವರು ತಮ್ಮ ಕುರ್ತಾ ಹರಿದುಕೊಂಡರು. ತಕ್ಷಣವೇ, ಪಿಡಿಪಿಯ ಮತ್ತೊಬ್ಬ ಸಂಸದ ನಜೀರ್ ಅಹ್ಮದ್ ಲಾವೇ ಅವರು ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರು..