ಕಡಬ: ರಾಮಕುಂಜ ಪದವಿ ಕಾಲೇಜಿನಲ್ಲಿ ಯಕ್ಷೋತ್ಸವ ‘ ಯಕ್ಷ ಸಂಕ್ರಾತಿ ‘ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಅಂಬಾ ಪ್ರಸಾದ್ ಪಾತಾಳ ನಮ್ಮಲ್ಲಿ ಕಲಾವಿಧರಿಗೆ ಕೊರತೆಯಿಲ್ಲ. ಆದರೆ ಅವರಿಗೆ ಉತ್ತಮ ವೇದಿಕೆಯ ಕೊರೆತೆಯಿಂದೆ. ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದ ಬಗ್ಗೆ ಒಂದಿಷ್ಟು ಅಭಿರುಚಿ ಕಡಿಮೆ ಎನಿಸಿದರೂ ಕರಾವಳಿ ಜಿಲ್ಲೆಯಲ್ಲಿ ಜನರ ಅಭಿಮಾನದ ದ್ಯೋತಕವಾಗಿ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ನ್ಯಾಯವಾದಿ ಕೆ.ಆರ್ ಆಚಾರ್ಯ ಮಾತನಾಡಿ, ಸಮಾಜದಲ್ಲಿ ಕಲಾವಿದ ಎನಿಸಿಕೊಂಡವನು ಶ್ರೇಷ್ಠನೆನೆಸಿಕೊಳ್ಳುತ್ತಾನೆ, ಕೋಟಿ ಹಣ ಇದ್ದವಗಿಂತಲೂ ಹೆಚ್ಚಿನ ಗೌರವಾದರಗಳು ಆತನಿಗೆ ಪ್ರಾಪ್ತಿಯಾಗುತ್ತದೆ. ಒಬ್ಬ ಕಲಾವಿಧನಿಗೆ ಬೇಕಾಗಿರುವುದು ಪ್ರೋತ್ಸಾಹ, ಅದನ್ನು ಸಮಾಜದಿಂದ ಆತ ಸದಾ ನಿರೀಕ್ಷಿಸುತ್ತಾನೆ. ಅಂತೆಯೇ ಯಕ್ಷಗಾನ ಕಲಾವಿದರಿಗೆ ಹಾಗೂ ಕಲಾವಿದರಾಗಲು ಹೊರಟವರಿಗೆ ಸೂಕ್ತ ಪ್ರೋತ್ಸಾಹದೊರೆತಲ್ಲಿ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.
ಕಡಬ ತಾಲೂಕು ಪರ್ತಕರ್ತ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊೈಲ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯೊಂದಿಗೆ ಈ ದೇಶದ ಮಹೋನ್ನತ ಸಂಸ್ಕøತಿಯನ್ನು ಅಭಿವ್ಯಕ್ತಿಗೊಳಿಸುವ ಯಕ್ಷಗಾನದಂತಹ ಶ್ರೇಷ್ಠ ಕಲೆಯ ಕಲಾವಿದರಾಗಲು ಮುನ್ನುಡಿ ಬರೆದರೆ ಮುಂದೆ ಸಮಾಜದಲ್ಲಿ ಒಬ್ಬ ಸಂಸ್ಕಾರಯುತ ಪ್ರಜೆಯಾಗಿ ಮೂಡಿಬರಬಹುದು ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟ, ತುಮಕೂರಿನ ಯಕ್ಷಗಾನ ಸಂಶೋಧಕ ಸಿಬಂತಿ ಪಧ್ಮನಾಭ ಮೊದಲಾದವರು ಶುಭ ಹಾರೈಸಿದರು.
ಯಕ್ಷಗಾನ ಕಲಾವಿದ ಕಾಲೇಜಿನ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಲೆ ಸ್ವಾಗತಿಸಿದರು. ಉಪನ್ಯಾಸಕ ಕೃಷ್ಣಮೂರ್ತಿ ವಂದಿಸಿದರು.
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪಂಚವಟಿ, ಗೋಕುಲನಗರ ಯಕ್ಷನಂದನಾ ಕಲಾ ಸಂಘದ ತಂಡದಿಂದ ಕುರುಕ್ಷೇತ್ರ, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸುದರ್ಶನ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವೀರಮಣಿ ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಶಿಕ್ಷಕರಿಂದ ದಕ್ಷಯಜ್ಞ ಎಂಬ ಪ್ರಸಂಗಗಳು ಪ್ರದರ್ಶನಗೊಂಡಿತು