ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕ ಸಂಘಟನೆಗಳಿಂದ ದಕ್ಷಿಣ ಕನ್ನಡ ಅಪರ ಆಯುಕ್ತರಾದ ಎಂ. ಜೆ. ರೂಪ ಅವರಿಗೆ, ಬಕ್ರೀದ್‍ನ ದಿನ ಪ್ರಾಣಿವಧೆಯನ್ನು ಮಾಡುವುದಕ್ಕೆ ಒಂದು ದಿನದ ಅನುಮತಿಯನ್ನು ನೀಡಲಾಗುತ್ತದೆ, ಈ ಅನುಮತಿ ಕಾನೂನು ಬಾಹಿರವಾಗಿದ್ದು ಯಾವುದೇ ಕಾರಣಕ್ಕೂ ಅನುಮತಿಯನ್ನು ನೀಡಬಾರದು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ್, ಯೋಗೀಶ್ ಅಶ್ವಥಪುರ, ಉಮಾ, ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಜಿಲ್ಲಾ ಅಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ಹರೀಶ್ ಬೊಕ್ಕಪಟ್ನ, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್, ಪುರಂದರ, ರವಿ ಮೂಡುಶೆಡ್ಡೆ ಉಪಸ್ಥಿತರಿದ್ದರು.