Wednesday, January 22, 2025
ಸುದ್ದಿ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಫ್ರೆಶರ್ಸ್ ಡೇ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಶ್ರೇಷ್ಠ ಮಟ್ಟದ ಸಾಧನೆಗಳಿಗೆ ಹೆಸರಾದ ವಿಜ್ಞಾನಿಗಳ ಆತ್ಮಚರಿತ್ರೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ವಿಜ್ಞಾನದ ವಿದ್ಯಾರ್ಥಿಗಳು ಸ್ಟೀಫನ್ ಹಾಕಿಂಗ್ ಎಂಬ ಸೈದ್ಧಾಂತಿಕ ಭೌತಶಾಸ್ತ್ರಜ್ಞನ ಸಾಧನೆಗಳಿಂದ ಪ್ರೇರಿತರಾಗಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಗಸ್ಟ್ 5ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಶಿಕ್ಷಣದ ಮೂಲ ಉದ್ದೇಶ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಶಿಕ್ಷಣವು ಅಗಾಧವಾದ ವ್ಯಾಪ್ತಿಯನ್ನು ಒಳಗೊಂಡಿದೆ. ಶಿಕ್ಷಣದೊಂದಿಗೆ ಮೌಲ್ಯ ಗಳಿಕೆಗೂ ಆದ್ಯತೆಯಿರಬೇಕು. ಶಿಸ್ತು, ಪ್ರಯತ್ನ ಮತ್ತು ಬದ್ಧತೆಗಳಿಂದ ಸಾಧನೆ ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಎಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಭೌತಶಾಸ್ತ್ರವು ನಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲಾ ನಮೂನೆಯ ಜ್ಞಾನವನ್ನು ನೀಡಲಾರದು. ಅದು ಕೆಲವಂಶಗಳನ್ನು ಮಾತ್ರ ನೀಡಬಲ್ಲದು. ಪರಿಪೂರ್ಣ ಬದುಕಿಗೆ ಎಲ್ಲಾ ಕ್ಷೇತ್ರಗಳ ಪರಿಜ್ಞಾನದ ಅಗತ್ಯವಿದೆ. ಆಸಕ್ತಿ, ಸತತ ಪರಿಶ್ರಮ, ಸಾಮಥ್ರ್ಯದ ಸದ್ಬಳಕೆ ಮೊದಲಾದ ಅಂಶಗಳು ನಮ್ಮನ್ನು ಪ್ರಗತಿ ಪಥದತ್ತ ಕೊಡೊಯ್ಯಬಲ್ಲವು ಎಂದು ಹೇಳಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ ಪಿ ರಾಧಾಕೃಷ್ಣ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ಷಿಪ್ರ ಗತಿಯ ಬದಲಾವಣೆಗಳು ಆಗುತ್ತಿರುತ್ತವೆ. ಯುಜಿಸಿಯು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಭೌತಶಾಸ್ತ್ರ ಸ್ನಾತಕೋತ್ತರ ಅಧ್ಯಯನವು ಅಗಾಧತೆಯನ್ನು ಹೊಂದಿದೆ. ವಿದ್ಯಾರ್ಥಿಗಳು ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಸಾಧ್ಯವಾದಷ್ಟು ಜ್ಞಾನ ಸಂಪಾದನೆಗೆ ಗುರಿಯಿಟ್ಟುಕೊಳ್ಳಬೇಕು. ಸ್ನಾತಕೋತ್ತರ ಗ್ರಂಥಾಲಯವು ಉತ್ತಮ ಪುಸ್ತಕಗಳನ್ನು ಒಳಗೊಂಡಿದೆ. ವಿಶಾಲವಾದ ಕ್ರೀಡಾಂಗಣವು ನಮ್ಮ ಮುಂದಿದೆ. ಸಮಯವನ್ನು ಅನ್ಯಥಾ ವ್ಯರ್ಥ ಮಾಡದೆ, ಸವಲತ್ತುಗಳ ಧನಾತ್ಮಕ ಬಳಕೆಗೆ ಪ್ರಯತ್ನಿಸಿ ಎಂದರು.

ವಿಭಾಗ ಸಂಯೋಜಕ ಡಾ. ಇ ದೀಪಕ್ ಡಿ’ಸಿಲ್ವ ಮಾತನಾಡಿ, ಶಿಕ್ಷಣವೆಂದರೆ ಕೇವಲ ಉತ್ತಮ ಫಲಿತಾಂಶ ಪಡೆಯುವುದೆಂದರ್ಥವಲ್ಲ. ಪ್ರಜ್ಞಾವಂತ ನಾಗರಿಕನನ್ನಾಗಿ ರೂಪಿಸುವುದೇ ಶಿಕ್ಷಣದ ಪ್ರಮುಖ ಧ್ಯೇಯ. ಭೌತಿಕ ಆಶೋತ್ತರಗಳೊಂದಿಗೆ ಸಾಮಾಜಿಕ ಕಳಕಳಿಯೂ ನಮ್ಮಲ್ಲಿರಬೇಕು. ಕೀರ್ತಿ ತರಬಲ್ಲ ವಿದ್ಯಾರ್ಥಿಗಳಿದ್ದಾಗ ಸಂಸ್ಥೆ ಉನ್ನತ ಸ್ಥಾನಮಾನವನ್ನು ಪಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಡಿ’ಸೋಜ, ಶ್ರೀದೇವಿ ಎಚ್, ಸವಿತಾ ಮೊಂತೆರೊ, ಆಶ್ರಿತ್ ವಿ ಕೆ, ಸಿಂಧು ಡಿ ಜಿ ಮತ್ತು ಶಿಲ್ಪ ಎಮ್ ಪಿ ಉಪಸ್ಥಿತರಿದ್ದರು.