Wednesday, January 22, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ “ಹದಿಹರೆಯ ಮತ್ತು ಕಾನೂನು” ವಿಷಯದ ಕುರಿತು ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಶ್ರಯದಲ್ಲಿ ಪುತ್ತೂರು ವಕೀಲರ ಸಂಘದ ಸಹಯೋಗದಲ್ಲಿ ನಡೆದ “ಹದಿಹರೆಯ ಮತ್ತು ಕಾನೂನು” ಎಂಬ ವಿಷಯದ ಕುರಿತ ಕಾರ್ಯಾಗಾರ ಮಂಗಳವಾರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಐದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡೋಲ್ಫ್ ಪಿರೇರಾ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಇವರು, ಭವ್ಯ ಭಾರತದ ಕನಸನ್ನು ಸ್ವಾಮಿ ವಿವೇಕಾನಂದರು ಕಂಡಿದ್ದರು. ಮತ್ತು ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಇಂದು ನಾವು ಯಾರಿಗೂ ಜವಾಬ್ದಾರಿ ನೀಡದಂತ ಪ್ರಸಂಗ ಎದುರಾಗಿದೆ. ಇದಕ್ಕೆ ಸಮಾಜವೇ ಕಾರಣ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮಂಜುನಾಥ ಮಾತನಾಡಿ, ಸಮಾಜದಲ್ಲಿ ನಡೆಯುವ ಕೃತ್ಯವನ್ನು ತಡೆಹಿಡಿಯಲು ನಮಗೆ ನಾವೇ ಕಾನೂನನ್ನು ರೂಪಿಸಿಕೊಂಡಿದ್ದೇವೆ. ಅದನ್ನು ನಾವು ಪಾಲಿಸಬೇಕಾಗಿದೆ. ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಮತ್ತು ವಕೀಲ ಎ. ಉದಯಶಂಕರ ಶೆಟ್ಟಿ ಮಾತನಾಡಿ, ಕಾನೂನಿನ ಬಗೆಗೆ ಮಾಹಿತಿ ತಿಳಿಯದೆ ಇರುವುದು ಒಂದು ರೀತಿಯ ಅಪರಾಧ. ಇಂದು ಮೊಬೈಲ್, ದೂರದರ್ಶನದಂತಹ ಅನೇಕ ಉಪಕರಣಗಳು ಯುವಕರನ್ನು ಆಕರ್ಷಿಸುತ್ತಿವೆ, ಆದರೆ ಇದರ ಉಪಯೋಗದಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯ. ಇಂದು ಶೇ.ಅರವತ್ತರಷ್ಟು ಅಪರಾಧಗಳು ಯುವಕರಿಂದಲೇ ಮಾಡಲ್ಪಟ್ಟಿದೆ. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಯುವಕರು ಸೈಬರ್‍ ಕ್ರೈಮ್‍ನಂತಹ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಯುವಕರು ಮತ್ತು ಅವರ ಕುಟುಂಬದವರು ಮುಜುಗರಪಡುವಂತಹ ಸನ್ನಿವೇಶಗಳು ಎದುರಾಗುತ್ತಿದೆ ಎಂದು ಹೇಳಿದರು.

ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ್ ಪೈ, ಕಾಲೇಜಿ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್,  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಸ್ವಾಗತಿಸಿದರು. ಎನ್.ಎಸ್.ಸಿ.ಡಿ.ಎಫ್. ಅಧ್ಯಕ್ಷ ಗಂಗಾಧರ್ ಗಾಂಧಿ ವಂದಿಸಿದರು. ಕರ್ನಾಟಕದ ಆಕಾಶವಾಣಿ ಕಾರ್ಯಕ್ರಮದ ನಿರೂಪಕಿ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.