Tuesday, January 21, 2025
ಸುದ್ದಿ

ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 100ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ – ಕಹಳೆ ನ್ಯೂಸ್

ಕುಣಿಗಲ್- ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು. ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ. ತಕ್ಷಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಇನ್ನುಳಿದ ಮಹಿಳೆಯರೂ ಕೂಡ ತೀವ್ರ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ರವಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲ್ಲೂಕು ವೈದ್ಯಾಧಿಕಾರಿ ಕಾರ್ಖಾನೆಯ ಕ್ಯಾಂಟೀನ್ ಪರಿಶೀಲಿಸಿದಾಗ ಆಹಾರ ತಯಾರಿಕೆಗೆ ಕಲುಷಿತ ನೀರು ಬಳಸಿರುವುದೇ ಪ್ರಮುಖ ಕಾರಣವಾಗಿದ್ದು, ಕ್ಯಾಂಟೀನ್ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲದಿರುವುದು ಕಂಡುಬಂದಿತು.
ಈ ಸಂಬಂಧ ಕಾರ್ಖಾನೆ ಹಾಗೂ ಕ್ಯಾಂಟೀನ್ ಮಾಲೀಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವೈದ್ಯಾಧಿಕಾರಿಗಳು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು