Tuesday, January 21, 2025
ಸುದ್ದಿ

ಕೊರಿಯರ್ ಮೂಲಕ ಬಂದ ತೀರ್ಥ ಸೇವಿಸಿದ ವ್ಯಕ್ತಿ ಸಾವು – ಕಹಳೆ ನ್ಯೂಸ್

ಮಡಿಕೇರಿ: ದೇವಾಲಯದ ಹೆಸರಿನಲ್ಲಿ ಕೊರಿಯರ್ ಮೂಲಕ ಬಂದ ತೀರ್ಥ ಸೇವಿಸಿದ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪೇಟೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ಗ್ರಾಮದ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್ ಮೃತ ವ್ಯಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುರೇಶ್ ಮನೆಗೆ ಕೊರಿಯರ್‍ ನಲ್ಲಿ ಪಾರ್ಸೆಲ್ ಒಂದು ಬಂದಿದೆ. ಅದನ್ನು ಅವರ ಪತ್ನಿ ಪಡೆದುಕೊಂಡಿದ್ದು, ಬಳಿಕ ಪತಿಗೆ ನೀಡಿದಾಗ ಕಾಸರಗೋಡು ವಿಷ್ಣುಮೂರ್ತಿ ಮಂತ್ರ ದೇವಾಲಯದಿಂದ ತೀರ್ಥ ಬಂದಿರುವುದಾಗಿ ಹೇಳಿದ್ದಾರೆ. ಬಳಿಕ ಪೂಜೆ ಮಾಡಿ, ಸುರೇಶ್ ಸೇವಿಸಿದ್ದಾರೆ. ಕೂಡಲೇ ಬಾಯಿಂದ ರಕ್ತ ಬರಲು ಆರಂಭಿಸಿದೆ. ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಸುರೇಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಪೂರಿತ ದ್ರಾವಣವನ್ನು ಕೊರಿಯರ್ ಮೂಲಕ ಕಳುಹಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.