Monday, January 20, 2025
ಸುದ್ದಿ

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು- ಕಹಳೆ ನ್ಯೂಸ್

ಪುತ್ತೂರು: ನೆಹರೂನಗರ ರೈಲ್ವೇ ಬ್ರಿಡ್ಜ್ ಮೇಲೆ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದ ವಸಂತ್(40) ಎಂಬುವವರು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುತ್ತೂರು ಕೊಳ್ತಿಗೆ ನಿವಾಸಿ ವಿನೋದ್ ಎಂಬವರಿಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮವಾಗಿ ಪಾದಾಚಾರಿ ಮತ್ತು ಬೈಕ್ ಸವಾರ ರಸ್ತೆಗೆ ಬಿದ್ದು ಪಾದಾಚಾರಿ ವಿನೋದ್ ರವರಿಗೆ ಗಾಯಾಗಳಾಗಿವೆ. ಬೈಕ್ ಸವಾರ ವಸಂತರವರಿಗೆ ತಲೆಗೆ ಗಾಯವಾಗಿದ್ದು, ಇಬ್ಬರನ್ನು ಸ್ಥಳೀಯರು ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು