Saturday, November 23, 2024
ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಕಡಿತ ಎಫೆಕ್ಟ್, ಎಸ್.ಬಿ.ಐ ಎಂಸಿಎಲ್‍ಆರ್ ದರ ಇಳಿಕೆ – ಕಹಳೆ ನ್ಯೂಸ್

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರ ಕಡಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ವಿವಿಧ ಅವಧಿಯ ಸಾಲದ ಮೇಲಿನ ಬಡ್ಡಿದರವನ್ನು (ಎಂಸಿಎಲ್‍ಆರ್) ಕಡಿತಗೊಳಿಸಿದೆ.

ಎಸ್‍ಬಿಐ ಬಡ್ಡಿದರ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಇತರ ಬ್ಯಾಂಕುಗಳು ಕೂಡ ತಮ್ಮ ಸಾಲ ದರವನ್ನು ಶೀಘ್ರದಲ್ಲೇ ಪರಿಶೀಲಿಸುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಸಿಎಲ್‍ಆರ್ (ಕನಿಷ್ಠ ವೆಚ್ಚ ಆಧಾರಿತ ಸಾಲ ದರಗಳು) 15 ಬೇಸಿಸ್ ಪಾಯಿಂಟ್‍ಗಳಿಂದ ಇಳಿಸುವುದಾಗಿ ಪ್ರಕಟಿಸಿದೆ. ಪರಿಷೃತ ದರ ಇದೇ ಆಗಸ್ಟ್ 10, 2019 ರಿಂದ ಜಾರಿಗೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ವರ್ಷದ ಎಂಸಿಎಲ್‍ಆರ್ ವಾರ್ಷಿಕ ಶೇ. 8.40 ರಿಂದ ವಾರ್ಷಿಕ ಶೇ. 8.25ಕ್ಕೆ ಇಳಿಕೆ ಕಂಡಿದ್ದು, 2019-20ನೇ ಹಣಕಾಸು ವರ್ಷದಲ್ಲಿ ಎಂಸಿಎಲ್‍ಆರ್ ಸತತ ನಾಲ್ಕನೇ ಬಾರಿ ಕಡಿತವಾಗಿದೆ ಎಂದು ಎಸ್‍ಬಿಐ ತಿಳಿಸಿದೆ. ಆರ್‍ಬಿಐನ ಆರು ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು 35 ಬೇಸಿಸ್ ಪಾಯಿಂಟ್‍ಗಳಿಂದ ಶೇ. 5.40ಕ್ಕೆ ಇಳಿಸಿದೆ.