Recent Posts

Sunday, January 19, 2025
ರಾಜಕೀಯ

ಯಡಿಯೂರಪ್ಪಾ ಎಲ್ಲಿದ್ದೀಯಪ್ಪಾ ಎಂದ ಮಾಜಿ ಸಿಎಂ ಕುಮಾರಸ್ವಾಮಿ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಶುರುವಾಗಿದೆ ಆದರೆ ಸಿಎಂ ಮಾತ್ರ ಕಾಣೆಯಾಗಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಟ್ರೋಲ್ ಮಾಡಿದ್ದೀರಾ, ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪಾ ಎಂದು ಕೇಳಿ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಬಡವರ ಪರವಾಗಿದ್ದಾರೆ ಎನ್ನುತ್ತಾರೆ, ನಾನು ಲೂಟಿಕೋರ ಎಂದು ಹೇಳುತ್ತಾರೆ, ಆದರೆ ಅವರ ಕಾಲದಲ್ಲಿ ವರ್ಗಾವಣೆ ನಡೆಯುತ್ತಿಲ್ಲವಾ..? ಯಾವ ರೀತಿ ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ವಾ..? ಎಂದು ಪ್ರಶ್ನಿಸಿದರು.
ಈಗಿನ ಬಿಡಿಎ ಆಯುಕ್ತರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ, ಆ ಆಯುಕ್ತರು ನನಗೆ ಆಮಿಷ ಒಡ್ಡಿದ್ದರು, ಅದನ್ನು ನಾನು ತಿರಸ್ಕರಿಸಿದ್ದೆ, ಈಗ ಬಿಡಿಎ ಆಯುಕ್ತರಾಗಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು