Monday, January 20, 2025
ಸುದ್ದಿ

ರಾಜಭವನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ – ಕಹಳೆ ನ್ಯೂಸ್

ಬೆಂಗಳೂರು: ರಾಜಭವನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 17 ರಿಂದ 30 ರವರೆಗೆ ಸಾರ್ವಜನಿಕರಿಗೆ ರಾಜಭವನಕ್ಕೆ ಪ್ರವೇಶ ಮಾಡಬಹುದು.

ಪ್ರತಿದಿನ ಮಧ್ಯಾಹ್ನ 3.30ರಿಂದ ಸಂಜೆ 7 ಗಂಟೆಯವರೆಗೆ ರಾಜಭವನಕ್ಕೆ ಭೇಟಿ ನೀಡಬಹುದು. ಆಸಕ್ತರು ತಮ್ಮ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಇಮೇಲ್ ಐಡಿ ಸೇರಿದಂತೆ ಸಂಪೂರ್ಣ ವಿವರಗಳೊಂದಿಗೆ ಆನ್ ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಭವನಕ್ಕೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಆನ್‍ಲೈನ್‍ನಲ್ಲಿ ದೃಢ ಪಡಿಸಲಾಗುವುದು. ಪ್ರವೇಶ ಪತ್ರ ಪಡೆದವರು ನಿಗದಿತ ದಿನದಂದು ರಾಜಭವನಕ್ಕೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು