Monday, January 20, 2025
ಸುದ್ದಿ

ವಾಯುಪ್ರದೇಶದ ಕಾರಿಡಾರ್‌ನ್ನು ಮುಚ್ಚಿದ ಪಾಕಿಸ್ತಾನ: ಮಾರ್ಗ ಬದಲಾವಣೆ ಮಾಡಿದ ಏರ್‌ಇಂಡಿಯಾ ವಿಮಾನ – ಕಹಳೆ ನ್ಯೂಸ್

ಹೊಸದಿಲ್ಲಿ: ಪಾಕಿಸ್ತಾನ ತನ್ನ ವಾಯುಪ್ರದೇಶದ ಕಾರಿಡಾರ್‌ನ್ನು ಮುಚ್ಚಿದ್ದು, ಇದರ ಪರಿಣಾಮವಾಗಿ ವಿದೇಶಕ್ಕೆ ತೆರಳುವ ವಿಮಾನಗಳನ್ನು ಬೇರೆ ಮಾರ್ಗಗಳಿಗೆ ಬದಲಾಯಿಸಬೇಕಾಗಿದೆ. ಇದರಿಂದ ನಮ್ಮ ಮೇಲೆ ಹೆಚ್ಚು ಪರಿಣಾಮಬೀರುವುದಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ. ಮಾರ್ಗ ಬದಲಾವಣೆಗೆ ಗರಿಷ್ಠ 12 ನಿಮಿಷ ಬೇಕಾಗುತ್ತದೆ.

ಪ್ರತಿದಿನ ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಏರ್ ಇಂಡಿಯಾದ 50 ವಿಮಾನಗಳು ಕಾರ್ಯಾಚರಿಸುತ್ತಿವೆ. ಈ ವಿಮಾನಗಳು ಅಮೆರಿಕ, ಯುರೋಪ್ ಹಾಗೂ ಮಿಡ್ಲ್ ಈಸ್ಟ್‌ಗೆ ತೆರಳುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಾಕೋಟ್ ದಾಳಿ ನಡೆದ ಬಳಿಕ ಪಾಕಿಸ್ತಾನ ಫೆಬ್ರವರಿ 26 ರಂದು ತನ್ನ ವಾಯು ಪ್ರದೇಶವನ್ನು ಮುಚ್ಚಿತ್ತು. ಜುಲೈ 16 ರಂದು ವಾಯುಪ್ರದೇಶವನ್ನು ಸಂಪೂರ್ಣ ತೆರವುಗೊಳಿಸಿತ್ತು. ಭಾರತದೊಂದಿಗೆ ತನ್ನ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಲ್ಲದೆ. ತನ್ನ ವಾಯುಪ್ರದೇಶವನ್ನು ಮುಚ್ಚಿದೆ, ಜಮ್ಮು-ಕಾಶ್ಮೀದ ವಿಶೇಷ ಸ್ಥಾನಮಾನ ನೀಡುವ ವಿಧಿ370ನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬಳಿಕ ಪಾಕಿಸ್ತಾನ ತನ್ನ ಭಾರತದ ರಾಯಭಾರಿಯನ್ನು ಉಚ್ಚಾಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು