Monday, January 20, 2025
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ಶ್ರೀ ರಾಮನಾಮ ಜಪ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀರಾಮ ರಾಜ್ಯದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀರಾಮ ನಾಮ ಸಂಕೀರ್ತನ ಅಭಿಯಾನವನ್ನು ಭಾರತದಾದ್ಯಂತ ನಡೆಸಲಾಗುತ್ತಿದೆ. ಇದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಬಂಟ್ವಾಳದ ಅನೇಕ ಸ್ಥಳಗಳಲ್ಲಿ ಈ ಅಭಿಯಾನದ ನಿಮಿತ್ತ ಭಜನಾ ಮಂಡಳಿಗಳಲ್ಲಿ, ದೇವಸ್ಥಾನಗಳಲ್ಲಿ ಪ್ರಾರ್ಥನೆಯೊಂದಿಗೆ ಶ್ರೀರಾಮನಾಮ ಜಪವನ್ನು ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಜಿತ್ ಕುಮಾರ್, ಕಿರಣ್, ಪಾಲಾಕ್ಷ, ರಾಧಾಕೃಷ್ಣ, ಅರುಣ ಪ್ರಸಾದ್, ಪ್ರಾರ್ಥನ್, ಚರಣ್, ಗಿರೀಶ್, ಜಗದೀಶ್ ಖಂಡಿಗ ಸೇರಿದಂತೆ ಬಂಟ್ವಾಳ ತಾಲೂಕಿನ ಎಲ್ಲಾ ಭಜನಾ ಮಂಡಳಿಯ ಸದಸ್ಯರು, ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು