Tuesday, January 21, 2025
ಸಿನಿಮಾ

ದರ್ಶನ್ ಇನ್ಮುಂದೆ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್: ಕುರುಕ್ಷೇತ್ರ ಸಿನಿಮಾ ನೋಡಿ ಸುಮಲತಾ `ಡಿ ಬಾಸ್’ ಗೆ ನೀಡಿದ್ರು ಹೊಸ ಬಿರುದು – ಕಹಳೆ ನ್ಯೂಸ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜನ್ ಸರ್ಜಾ, ನಿಖಿಲ್ ಕುಮಾರ್ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಇಂದು ಬಿಡುಗಡೆಯಾಗಿದೆ. ಬೆಂಗಳೂರಿನ ಮಂತ್ರಿಮಾಲ್ ನಲ್ಲಿ ಸಿನಿಮಾದ ಪ್ರೀಮೀಯರ್ ಶೋ ನೋಡಿದ ಸುಮಲತಾ ಅಂಬರೀಶ್ ದರ್ಶನ್ ಸೇರಿದಂತೆ ಎಲ್ಲ ನಟರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಗೋಳ್ಳಿ ರಾಯಣ್ಣ ಸಿನಿಮಾದ ಬಳಿಕ ದರ್ಶನ್ ಅವರಿಗೆ ಕುರುಕ್ಷೇತ್ರ ಲ್ಯಾಂಡ್ ಮಾರ್ಕ್ ಆಗುತ್ತದೆ. ದುರ್ಯೋಧನ ಅಂದರೆ ದರ್ಶನ್ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇದೆ. ದರ್ಶನ್ ಇನ್ಮುಂದೆ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್ ಎಂದು ಹೊಸ ಬಿರುದು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಸಿನಿಮಾ ನನಗೆ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನು ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಅವರು ನಟಿಸಲ್ಲ ಎಂದರೂ ಮುನಿರತ್ನ ಅವರ ಕೋರಿಕೆ ಮೇಲೆ ನಟಿಸಿದ್ದರು. ಆದ್ದರಿಂದಲೇ ಅವರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು