Tuesday, January 21, 2025
ಸುದ್ದಿ

ಭಾರೀ ಮಳೆಯಿಂದಾಗಿ ಮನೆಗೆ ಹಾನಿ; ನೆರವಾದ ಶಾಸಕ ಹರೀಶ್ ಪೂಂಜ: – ಕಹಳೆ ನ್ಯೂಸ್

ಬೆಳ್ತಂಗಡಿ:ಭಾರೀ ಮಳೆಯಿಂದಾಗಿ ಎಲ್ಲೆಡೆ ಅಪಾರ ಹಾನಿ ಉಂಟಾಗಿದೆ. ಮರ ಕುಸಿದು ಮನೆಗೆ ಬಿದ್ದಿದ್ದು, ಅಪಾರ ಹಾನಿ ಸಂಭವಿಸಿದೆ. ಅಧಿಕಾರದ ಪರಿಧಿಗಿಂತ ಹೆಚ್ಚು ನಮ್ಮೂರ ಜನರ ಸಮಸ್ಯಗೆ ಸ್ಪಂದಿಸುವುದು ಮುಖ್ಯವೆಂದು ಅರಿತಿರುವ ಶಾಸಕ ಹರೀಶ್ ಪೂಂಜ, ಸರ್ಕಾರದ ಅನುದಾನವನ್ನು ಕಾಯದೆ ಪ್ರಥಮವಾಗಿ ತನ್ನ ಕೈಯಾಲ್ಲಾಗುವ ಸಹಾಯವನ್ನು ಕೂಡಲೆ ತನ್ನ ಅಪ್ತ ಸಹಾಯಕರನ್ನು ಕಳುಹಿಸಿ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ಶಾಸಕರ ಅಪ್ತ ಕಾರ್ಯದರ್ಶಿ ಮಂಜುನಾಥ್ ಮಳೆಯನ್ನು ಲೆಕ್ಕಿಸದೆ ಊರ ಜನರೂಂದಿಗೆ ಸೇರಿ ಬಿದ್ದ ಮರವನ್ನು ತೆರವು ಮಾಡುವುದನ್ನು ಕಂಡು ಅಲ್ಲಿಯ ಜನರು ಮಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳಿ ಗ್ರಾಮದ ಗೇರುಕಟ್ಟೆ ಫೈವ್ ಸೆಂಟ್ಸ್ ನಿವಾಸಿ ಜಯಂತಿ ಅವರಿಗೆ- 10,000 ರೂ., ಕಳೆಂಜ ಗ್ರಾಮದ ಕೇದಗೆದಡಿ ನಿವಾಸಿ ನೀಲಮ್ಮ, ಬಾಬು ಗೌಡ – 10,000 ರೂ., ಲಾಯಿಲ ಗ್ರಾಮದ ಪುತ್ರಬೈಲು ಚಿಣ್ಣಯ ಕುಲಾಲ್-5,000 ರೂ., ಶಿರ್ಲಾಲು ಗ್ರಾಮದ ಮಂಡ್ಯೊಟ್ಟು ನಿವಾಸಿ ಕೊರಗಪ್ಪ ಮಲೆಕುಡಿಯ-10,000 ರೂ., ಸುಲ್ಕೇರಿಮೊಗ್ರು ಗ್ರಾಮದ ಪುನ್ಕೆದಕಂಡ ನಿವಾಸಿ ಸಂಜೀವ ನಾಯ್ಕ-5,000 ರೂ., ಕಲ್ಮಂಜ ಗ್ರಾಮದ ಕುಕ್ಕೆಮಜಲು ನಿವಾಸಿ ಜಯಂತ್ ಗೌಡ-5,000 ರೂ., ನೆರಿಯ ಗ್ರಾಮದ ಕೋಲ್ನ ನಿವಾಸಿ ಗಂಗಾಧರ ಗೌಡ-5,000 ರೂ., ಚಾರ್ಮಾಡಿ ಗ್ರಾಮದ ಗಾಂಧಿನಗರ ನಿವಾಸಿ ಕಲ್ಯಾಣಿ – 5,000 ರೂ., ಸವಣಾಲು ಗ್ರಾಮದ ಪಾಂಚಾರು ಮಲೆ ನಿವಾಸಿ ಶ್ರೀ ಕೃಷ್ಣಪ್ಪ ನಾಯ್ಕ – 5,000 ರೂ. ಈ ಎಲ್ಲಾ ಕುಟುಂಬಗಳ ಮನೆಗಳಿಗೆ ಹಾನಿಯಾಗಿದ್ದು, ಈ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದರು.

ಅಪಾರ ಹಾನಿಉಂಟಾದ ಮನೆಗಳಿಗೆ ಕೂಡಲೇ ಸಹಾಯ ಹಸ್ತವನ್ನು ನೀಡಿರುವುದು ಹೆಮ್ಮೆಯ ವಿಷಯವೆಂದು ಸಂತ್ರಸ್ತರು ತಿಳಿಸಿದರು. ಹರೀಶ್ ಪೂಂಜರವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗಿದೆ.