ಮನೆ ಮನೆಯಿಂದ ಕಸ ಸಂಗ್ರಹಿಸಿ, ಎಲ್ಲೆಂದರಲ್ಲಿ ಕಸ ಬಿಸಾಡದಿರಿ – ಟೀಮ್ ಸ್ವಚ್ಛ ಪುತ್ತೂರಿನಿಂದ ನಗರಸಭೆ, ಪುರಸಭೆಗೆ ಮನವಿ.
ಪುತ್ತೂರು : ಎಲ್ಲೆಂದರಲ್ಲಿ ಕಸ ಬಿಸಾಡದಿರಿ ಎಂದು ನಾಗರಿಕರಲ್ಲಿ ವಿನಂತಿಸಿದರೆ ‘ಮನೆ ಮನೆಗೆ ಬಂದು ಕಸಗಳನ್ನು ಸಂಗ್ರಹ ಮಾಡಬೇಕಾದ ಪುರಸಭೆಯ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ.ಆದುದರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಹೊರಗಡೆ ಎಸೆಯದೆ ಏನು ಮಾಡುವುದು’ ಎಂದು ನಾಗರಿಕರು ಪ್ರಶ್ನಿಸುತ್ತಾರೆ.ಈ ಹಿನ್ನೆಲೆಯಲ್ಲಿ ಪುರಸಭೆಯವರು ತಕ್ಷಣವೇ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಿ ರಾಮಕೃಷ್ಣ ಮಿಷನ್ ಮಾರ್ಗದರ್ಶನದ ‘ಟೀಮ್ ಸ್ವಚ್ಛ ಪುತ್ತೂರು’ನ ಕಾರ್ಯಕರ್ತರು ಜನವರಿ 16ರಂದು ಎ.ಸಿ ಕಛೇರಿ, ಪೌರಾಯುಕ್ತರು ಮತ್ತು ಪುರಸಭೆಯ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಟೀಮ್ ಸ್ವಚ್ಛ ಪುತ್ತೂರು ಇದರ ಮುಖ್ಯಸಂಯೋಜಕ ಶ್ರೀಕೃಷ್ಣ ಉಪಾಧ್ಯಾಯ, ಕಾರ್ಯಕರ್ತರಾದ ಹರ್ಷೇಂದ್ರ ರೈ ಕಾವು,ಜಯಪ್ರಕಾಶ್ ಆಚಾರ್ಯ, ವಿನೋದ್ ನಗರ,ಜಿ ಕೃಷ್ಣ,ಶಂಕರ್ ಮಲ್ಯ ಇರ್ದೆ,ದಿನೇಶ್ ಕುಮಾರ್ ಜೈನ್,ಟೀಮ್ ನರೇಂದ್ರ ಸೇವಾಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ವಾಗ್ಲೆ ಮೊದಲಾದವರು ಉಪಸ್ಥಿತರಿದ್ದರು.