Wednesday, January 22, 2025
ಸುದ್ದಿ

ಭಾರೀ ಮಳೆಯಿಂದ ಮನೆಗೆ ಹಾನಿ; ಶಾಸಕರಿಂದ ಧನಸಹಾಯ – ಕಹಳೆ ನ್ಯೂಸ್

ಬೆಳ್ತಂಗಡಿ: ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಸವಣಾಲು ಗ್ರಾಮದ ಪಾಂಚಾರುಮಲೆ ನಿವಾಸಿ ಕೃಷ್ಣಪ್ಪ ನಾಯ್ಕ ಅವರ ಮನೆಗೆ ಹಾನಿಯಾಗಿದೆ. ಈ ಹಿನ್ನಲೆ ತಾಲೂಕಿನ ಶಾಸಕ ಹರೀಶ್ ಪೂಂಜರವರ ನಿರ್ದೇಶನದ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಸಕರ ವೈಯಕ್ತಿಕ ಧನ ರೂ.5,000 ಸಂತ್ರಸ್ತರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಳಿನಿ, ಪಂಚಾಯತ್ ಸದಸ್ಯ ಪ್ರಭಾಕರ್, ಸ್ಥಳೀಯ ಸಂತೋಷ್, ಚಂದ್ರರಾಜ್ ಜೊತೆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು