Wednesday, January 22, 2025
ಸುದ್ದಿ

ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಏಕಾಏಕಿ ಹೆಚ್ಚು – ಕಹಳೆ ನ್ಯೂಸ್

ಮಂಗಳೂರು: ಪಶ್ಚಿಮಘಟ್ಟ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಗುರುವಾರ ಏಕಾಏಕಿ ಹೆಚ್ಚಾಗಿದೆ. ಸದ್ಯಕ್ಕೆ ತುಂಬೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಗಳಷ್ಟಿದೆ. ಇಲ್ಲಿ ನದಿಯ ಅಪಾಯದ ಮಟ್ಟ 9 ಮೀಟರ್‍ಗಳಾಗಿದೆ. ನೇತ್ರಾವತಿ ನೆರೆಯಿಂದಾಗಿ ಬಂಟ್ವಾಳ ನಗರ ಸೇರಿದಂತೆ ಅಜಿಲಮೊಗರು, ಸರಪಾಡಿ, ಕಡೇಶಿವಾಲಯ, ಬರಿಮಾರು, ನಾವೂರು, ನರಿಕೊಂಬು, ತುಂಬೆ ಮೊದಲಾದ ಗ್ರಾಮಗಳ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಬಹುತೇಕ ಕಡೆ ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಕೆಲವೊಂದೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ನೆರೆಬಾಧಿತ ಪ್ರದೇಶ ಪಾಣೆಮಂಗಳೂರಿನ ಆಲಡ್ಕದಲ್ಲಿ ಸುಮಾರು 15 ಮನೆಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಭಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಜಕ್ರಿಬೆಟ್ಟು, ಕಂಚಿಗಾರಪೇಟೆ, ಆಲಡ್ಕ, ಅಜಿಲಮೊಗರು, ಸರಪಾಡಿ ಭಾಗಗಳಲ್ಲಿ ನದಿ ನೀರು ರಸ್ತೆಗೆ ಬಂದ ಕಾರಣ ಈ ಭಾಗಗಳಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು