Wednesday, January 22, 2025
ಸುದ್ದಿ

ಕಪಿಲಾ ನದಿಯಲ್ಲಿ ಮರಳು ತೆಗೆಯಲೆಂದು ಇಳಿದ ಯುವಕನ ಸಾವು -ಕಹಳೆ ನ್ಯೂಸ್

ಕೊಕ್ಕಡ : ಕೊಕ್ಕಡ ಸಮೀಪದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಯಲ್ಲಿ ಮರಳು ತೆಗೆಯಲೆಂದು ಇಳಿದ ಯುವಕ ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ವೇಳೆ ನಡೆದಿದೆ.

ನದಿಯಲ್ಲಿ ನೆರೆ ನೀರು ಪ್ರವಾಹ ಅಧಿಕವಾಗಿದ್ದರೂ, ಸ್ಥಳೀಯ ಅಕ್ರಮ ಮರಳುಗಾರಿಕೆ ತಂಡವೊಂದು ಮಳೆಯನ್ನೂ ಲೆಕ್ಕಿಸದೆ, ನದಿಪಾತ್ರದಲ್ಲಿ ಪಿಕಪ್ ನಿಲ್ಲಿಸಿ ನದಿನೀರಲ್ಲಿ ಮುಳುಗಿ, ಮರಳು ತೆಗೆಯುವ ದಂಧೆ ಕೊಕ್ಕಡ ಭಾಗದಲ್ಲಿ ನಿರಂತರ ನಡೆಯುತ್ತಿತ್ತು. ಪ್ರವಾಹದ ಸೆಳೆತಕ್ಕೆ ಒಳಗಾಗಿ ಓರ್ವ ಯುವಕ ಮೃತ ಪಟ್ಟಂತಾಗಿದೆ. ಮೃತ ಪಟ್ಟ ಯುವಕ ಕೊಕ್ಕಡದ ನಿವಾಸಿ ವಿಶ್ವನಾಥ ಎಂಬವರ ಮಗ ಭವಿತ್ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು