Thursday, January 23, 2025
ಸುದ್ದಿ

ಮೂಡಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಮಳೆನೀರು ಕೊಯ್ಲು ಕಾರ್ಯಕ್ರಮ-ಕಹಳೆ ನ್ಯೂಸ್

ಮೂಡಬಿದಿರೆ:ಎಷ್ಟೋ ಕೋಟಿ ಲೀಟರ್ ಮಳೆ ನೀರು ಪ್ರತಿವರ್ಷ ಭೂಮಿಗೆ ಬಿದ್ದು, ಚರಂಡಿ ಸೇರಿ ಸಮುದ್ರ ಪಾಲಾಗುತ್ತಿದೆ. ಭೂಮಿಗೆ ಬಿದ್ದ ಮಳೆ ನೀರನ್ನು ಸಂಸ್ಕರಿಸಿ, ಮರು ಬಳಕೆ ಮಾಡಬೇಕಾದ ಅವಶ್ಯಕತೆಯಿದೆಯೆಂದು ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜೋಸೆಫ್ ಎನ್.ಎಂ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯಜೈನ್ ಮಿಲನ್, ‘ಉದಯವಾಣಿ’ ದೈನಿಕದ ಸಹಯೋಗದಲ್ಲಿ ನಡೆದ ‘ಮನೆ ಮನೆಗೆ ನೀರು ಕೊಯ್ಲು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದಿರೆ ಎಂ.ಸಿ.ಸಿ. ಬ್ಯಾಂಕಿನ ಕಾರ್ಯ ನಿರ್ವಹಕಾಧಿಕಾರಿ ಚಂದ್ರಶೇಖರ ಎಂ, ‘ಉದಯವಾಣಿ’ ದೈನಿಕದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು, ರೈತ ಸಂಘದ ಧನಕೀರ್ತಿ ಬಲಿಪ ಹಂಡೇಲುಗುತ್ತು, ಕೃಷಿ ಸಮಾಜದ ಜಿಲ್ಲಾ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಜೈನ್ ಮಿಲನ್ ವಲಯಾಧ್ಯಕ್ಷ ವೀರಾಂಗನೆ ಶ್ವೇತಾಜೈನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ಪಂಚಮಿ, ಪ್ರಕೃತಿ, ಹರ್ಷಿತಾ ಪ್ರಾರ್ಥನೆ ನೆರವೇರಿಸಿದರು. ಜೈನ್ ಮಿಲನ್‍ನ ವಲಯ ನಿರ್ದೇಶಕ ವೀರ್ ಜಯರಾಜ ಕಂಬಳಿ.ಪಿ ಸ್ವಾಗರಿಸಿದರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ರಶ್ಮಿತಾ ಜೈನ್ ವಂದಿಸಿದರು.