Thursday, January 23, 2025
ಸುದ್ದಿ

ಪ್ರವಾಹವೇರುವ ಅಪಾಯ: ಪಾಣೆಮಂಗಳೂರು ಗಂಜಿ ಕೇಂದ್ರಕ್ಕೆ 80ಕ್ಕೂ ಅಧಿಕ ಮಂದಿಯ ಸ್ಥಳಾಂತರ – ಕಹಳೆ ನ್ಯೂಸ್

ಬಂಟ್ವಾಳ: ನೇತ್ರಾವತಿಯಲ್ಲಿ ಪ್ರವಾಹವೇರುವ ಅಪಾಯ ಇರುವ ಕಾರಣ ಗುರುವಾರ ರಾತ್ರಿ ಬಂಟ್ವಾಳದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿರುವ ಗಂಜಿಕೇಂದ್ರಕ್ಕೆ ನೇತ್ರಾವತಿ ತೀರದಲ್ಲಿರುವ ಸುಣ್ಣದಗೂಡು ಪ್ರದೇಶದ ಸುಮಾರು 80ಕ್ಕೂ ಅಧಿಕ ಜನರನ್ನು ರಾತ್ರಿ ಸುಮಾರು 9.45ರ ವೇಳೆ ಸ್ಥಳಾಂತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರಲ್ಲಿ ಕಾರ್ಮಿಕರು, ಅವರ ಕುಟುಂಬದವರು ಇದ್ದಾರೆ. ಮುಂಜಾಗರೂಕತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು, ಕಂದಾಯಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು