Friday, January 24, 2025
ಸುದ್ದಿ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಸಾಗಾಟಕ್ಕೆ ಬ್ರೇಕ್ ಹಾಕಿ ; ಪುತ್ತೂರಿನಲ್ಲಿ ಪೊಲೀಸರಿಗೆ ಬಜರಂಗದಳ, ವಿ.ಎಚ್.ಪಿ. ಮನವಿ – ಕಹಳೆ ನ್ಯೂಸ್

ಪುತ್ತೂರು : ಬಕ್ರೀದ್ ಹಬ್ಬ ಸಮೀಪವಿರುವುದರಿಂದ, ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ವಿಪರೀತವಾಗಿ ಹೆಚ್ಚಾಗುವ ಸಂಭವವಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖ್ ಅಡ್ವ.ಮಾಧವ ಪೂಜಾರಿ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ಸಾಪ್ತಾಹಿಕ್ ಮಿಲನ್ ಪ್ರಮುಖ್ ವಿಶಾಖ್ ಸಸಿಹಿತ್ಲು, ಬಜರಂಗದಳ ನಗರ ಸಹ ಸಂಚಾಲಕ ಚೇತನ್ ಬೊಳುವಾರು, ನಗರ ಗೋರಕ್ಷಾ ಪ್ರಮುಖ್ ದೇವರಾಜ್ ಸಿಂಹವನ, ಬೊಳುವಾರು ಘಟಕ ಸಂಚಾಲಕ ನವೀನ ಬೊಳುವಾರು, ತಿಂಗಳಾಡಿ ಘಟಕದ ಕಾರ್ಯದರ್ಶಿ ಧನಂಜಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು