Wednesday, November 27, 2024
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ‌ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ – ಕಹಳೆ ನ್ಯೂಸ್

ಮಂಗಳೂರು: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ‌‌ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈಗ ಎಲ್ಲರೂ ಬಿ ಎಲರ್ಟ್ ಇರಬೇಕಾಗಿದೆ. ಏಕೆಂದರೆ ನೇತ್ರಾವತಿ, ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಮಳೆಯ ಕಾರಣದಿಂದ ಸಮುದ್ರ ಅಲೆಗಳು 3.2 ರಿಂದ 3.9 ಮೀಟರ್ ಎತ್ತರದಲ್ಲಿದೆ.‌ ಮೀನುಗಾರರು ಸಮುದ್ರಕ್ಕೆ‌ ಇಳಿಯದಂತೆ ಸೂಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೇತ್ರಾವತಿ, ಕುಮಾರಧಾರ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. 13 ಜನರ ಎನ್ ಡಿ ಆರ್ ಎಫ್ ತಂಡವು ಸುಬ್ರಹ್ಮಣ್ಯ, ಮಂಗಳೂರಿನಲ್ಲಿ‌ ಸನ್ನದ್ಧ ಸ್ಥಿತಿಯಲ್ಲಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಗಂಜಿ‌ ಕೇಂದ್ರ ತೆರೆಯಲಾಗಿದ್ದು
ಮಂಗಳೂರಿನಲ್ಲಿ 12, ಬಂಟ್ವಾಳ 2, ಬೆಳ್ತಂಗಡಿ 7, ಪುತ್ತೂರು ,ಮೂಡುಬಿದಿರೆ,ಕಡಬದಲ್ಲಿ ತಲಾ ಒಂದು, ಸುಳ್ಯ ತಾಲೂಕಿನಲ್ಲಿ 2 ಕಡೆ‌ ಕೇಂದ್ರ ತೆರೆಯಲಾಾಗಿದೆ.

ಯಾವುದೇ ‌ತುರ್ತು ಸಹಾಯಕ್ಕೆ ಸಾರ್ವಜನಿಕರು ಇಲಾಖೆಗಳನ್ನು ಸಂಪರ್ಕಿಲು ಕೋರಲಾಗಿದೆ.