Thursday, January 23, 2025
ಸುದ್ದಿ

Breaking News : ರಾತ್ರಿಪೂರ್ತಿ ಸುರಿದ ಮಹಾ ಮಳೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ – ಉಪ್ಪಿನಂಗಡಿ – ನೆಲ್ಯಾಡಿ – ಬೆಳ್ತಂಗಡಿ – ಬಂಟ್ವಾಳಗಳ ಸ್ಥಿತಿ ಭೀಕರ, ಆಪಾರ ಹಾನಿ – ಕ್ಷಣದಿಂದ ಕ್ಷಣಕ್ಕೆ ಏರುತ್ತಿರುವ ನೀರಿನ ಮಟ್ಟ – ಕಹಳೆ ನ್ಯೂಸ್

ದ.ಕ. : ಕರಾವಳಿಯಲ್ಲಿ ಮಹಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಪ್ರಮುಖ ನೇತ್ರಾವತಿ ಮತ್ತು ಕುಮಾರರಾಧಾ ನದಿಗಳು ಉಕ್ಕಿ ಹರಿಯುತ್ತಿದ್ದು ಜಿಲ್ಲೆಯಲ್ಲಿ ಪ್ರಮುಖ ನಗರಗಳಾದ ಉಪ್ಪಿನಂಗಡಿ, ಬಂಟ್ಬಾಳ‌ದ ಪೇಟೆಗೆ ನರೆ ನುಗ್ಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಉಪ್ಪಿನಂಗಡಿ ಸಂಜೆ 7.00 ಗಂಟೆ ಹೊತ್ತಿಗೆ ಸಂಗಮ ನಡೆದು, ನಂತರ ನೀರಿನ ಮಟ್ಟ ಎರುತ್ತಾ ಹೊಗಿದೆ, ಪರಿಣಾಮ‌ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶೆಣೈ ಪರಿಸರ ಆಸ್ಪತ್ರೆ, ಹಳೇ ಬಸ್ ನಿಲ್ದಾಣ, ಮಾರುಕಟ್ಟೆ – ನಿರಾಲ ಬಾರ್ ನ ಪರಿಸರ ಸಂಪೂರ್ಣ ಮುಳುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಪೇಟೆಯ ಪ್ರಮುಖ ಅಂಗಡಿಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಇದ್ದ ಎಲ್ಲಾ ಅಂಗಡಿಗಳು, ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ.

ಬೆಳ್ತಂಗಡಿಯ ಹಲವಾರು ಭಾಗಗಳಲ್ಲಿ ಗುಡ್ಡ ಕುಸಿತವಾಗಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ. ಉಪ್ಪಿನಂಗಡಿ ಸಮೀಪದ ನೇತ್ರಾವತಿ ನದಿಯಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾದ ತೂಗುಸೇತು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಚಾರ್ಮಾಡಿ ಘಾಟಿ ಸಂಪೂರ್ಣ ಬಂದ್ ಆಗಿದೆ.

ನೆಲ್ಯಾಡಿ – ಉದನೆ – ಶಿರಾಡಿ – ನೀರಕಟ್ಟೆ – ವಳಾಲು – ಕುಟೇಲು ಸಮೀಪ ನದಿ ಬದಿಯ ಮನೆಗಳಿಗೆ ಹಾನಿಯಾಗಿದ್ದು, ನದಿಯ ನೀರು ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಇದ್ದು, ಸಂಪೂರ್ಣ ಬಂದ್ ಆಗಿದೆ.

ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ಪರಿಸ್ಥಿತಿ ಗಂಭೀರವಾಗಿದೆ.