Thursday, January 23, 2025
ಸುದ್ದಿ

#HelpBELTHANGADY ಸಹಾಯ ಹಸ್ತ ಬೇಕಾಗಿದೆ ; ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಲ್ಲಿ ರಕ್ಷಣಾಕಾರ್ಯದಲ್ಲಿ 24 × 7 ಶ್ರಮಿಸುತ್ತಿರುವ ” ಶ್ರಮಿಕ ” ಪೂಂಜರಿಂದ ಮನವಿ – ಕಹಳೆ ನ್ಯೂಸ್

ಬೆಳ್ತಂಗಡಿ : ಜಿಲ್ಲೆಯಲ್ಲಿ ಸುರಿಯುತ್ತಿರು ಭಾರಿ ಮಳೆಗೆ ಬೆಳ್ತಂಗಡಿ ತತ್ತರಿಸಿ ಹೋಗಿದೆ, ತಾಲೂಕಿನ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಜನರು ತಮ್ಮ ಮನೆ ಮಠ ಕಳೆದುಕೊಂಡು ಅನಾಥರಾಗಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಯುವ ಶಾಸಕ ಹರೀಶ್ ಪೂಂಜ 24 × 7 ಶ್ರಮಿಸುತ್ತಿದ್ದು, ಜನರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಜನತೆಯಲ್ಲಿ ಶಾಸಕರು ಮನವಿಯೊಂದನ್ನು ತಮ್ಮ ಸಾಮಾಜಿಕ ಜಾಲಣಗಳ ಮೂಲಕ ಮಾಡಿಕೊಂಡಿದ್ದಾರೆ.


ಶಾಸಕ ಹರೀಶ್ ಪೂಂಜ ಮನವಿ :

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧುಗಳೇ,
ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದಿಂದ ಸಂತ್ರಸ್ತರಾದ ನನ್ನ ಬಂಧುಗಳಿಗೆ ಮಲಗುವ ವ್ಯವಸ್ಥೆಗೆ ಬೇಕಾದ #ಚಾಪೆ, #ಹಾಸಿಗೆ ಹಾಗೂ #ಹೊದಿಕೆ ಬಹಳ ಅಗತ್ಯವಾಗಿ ಬೇಕಾಗಿದೆ. #ಪ್ರಥಮ ಚಿಕಿತ್ಸೆಯ ಸಾಮಗ್ರಿಗಳು, #ಸ್ಯಾನಿಟರಿ ಪ್ಯಾಡ್, ಮಕ್ಕಳ #ಡೈಪರ್, #ಬಿಸ್ಕೆಟ್ ಹಾಗೂ ಶುದ್ಧ #ಕುಡಿಯುವ ನೀರಿನ ಅಗತ್ಯ ಬಹಳ ಇದೆ. ಸದ್ಯದ ಅಗತ್ಯತೆಗಳು ಇವು, ಇದನ್ನು ಹೊರತುಪಡಿಸಿ ಏನಾದರೂ ಅಗತ್ಯ ಬಿದ್ದರೆ ತಿಳಿಸಲಾಗುವುದು.

ದಾನಿಗಳು ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿರುವ “ಶ್ರಮಿಕ, ಶಾಸಕರ ಕಚೇರಿ”ಗೆ ಈ ವಸ್ತುಗಳನ್ನು ತಲುಪಿಸಿದರೆ ಅಗತ್ಯವಿರುವ ಜನರಿಗೆ ಅಲ್ಲಿಂದ ತಲುಪಿಸಲಾಗುವುದು.

ನನ್ನ ಜನರಿಗೀಗ ನಿಮ್ಮ ಸಹಾಯ ಬೇಕಾಗಿದೆ

ನಿಮ್ಮವ
ಹರೀಶ್ ಪೂಂಜ
ಸಂಪರ್ಕ ಸಂಖ್ಯೆ:
9663471620: ಸಂದೇಶ್ ಗೌಡ
8147953299: ಸಂದೀಪ್ ಮುಗೇರೋಡಿ

#HelpBELTHANGADY