Wednesday, January 22, 2025
ಸುದ್ದಿ

ಭಾರೀ ಮಳೆ, ಭೂಕುಸಿತ: ಆಗಸ್ಟ್ 12ರವರೆಗೆ ಶಿರಾಡಿ ಘಾಟ್ ಬಂದ್-ಕಹಳೆ ನ್ಯೂಸ್

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಇತರೆ ಕಡೆ ಮಳೆ ಅರ್ಭಟ ಹೆಚ್ಚಾಗಿದ್ದು ಗುಡ್ಡೆ ಕುಸಿತ, ಮರ, ವಿದ್ಯುತ್ ಕಂಬ ಉರುಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾಡಿಘಾಟ್‍ನಲ್ಲಿ ವಾಹನ ಸಂಚಾರ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಇಂದು ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ದಿಂದ ಆ.12ರವರೆಗೆ ಸಂಜೆ ಏಳರಿಂದ ಮುಂಜಾನೆ ಏಳರವರೆಗೆ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಸಾಮಗ್ರಿಗಳ ವಾಹನ, ಷರತ್ತು ಬದ್ದ ಸಾರ್ವಜನಿಕ ಬಸ್ ಸಂಚಾರ ಹೊರತು ಇತರೆ ವಾಹನಗಳ ಸಂಚಾರ ನಿಬರ್ಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರು ಔಷಧಿ, ಪ್ರಥಮ ಚಿಕಿತ್ಸೆ ಪ್ರಕರಣಗಳು, ಬೇಕಾದಷ್ಟು ಆಹಾರ ಸಾಮಗ್ರಿ, ಕುಡಿಯುವ ನೀರು, ವಾಹನ ಪರವಾನಗಿ ದಾಖಲಾತಿ ಇನ್ನೂ ಮೊದಲಾದವನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಹಾಗೆಯೇ ತಪಾಸಣಾಧಿಕಾರಿಗಳಿಗೆ ತಪಾಸಣೆ ವೇಳೆ ದಾಖಲಾತಿಗಳನ್ನು ಕಡ್ಡಾಯ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು