Tuesday, January 21, 2025
ಸುದ್ದಿ

ನಾಳೆ ಕಡಬದಲ್ಲಿ ಆಟಿಡೊಂಜಿ ಸಂತೋಷ ಕೂಟೊ – ಕಹಳೆ ನ್ಯೂಸ್

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಯುವ ಮತ್ತು ಮಹಿಳಾ ಘಟಕ ಕಡಬ ವಲಯ ಇದರ ವತಿಯಿಂದ ಆ.11ರಂದು ಆಟಿಡೊಂಜಿ ಸಂತೋಷ ಕೂಟೊ-2019, ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ಕೃಷಿ ಗಣಪಯ್ಯ ಗೌಡ ಪುತ್ತಿಲ, ಇವರು ದೀಪ ಪ್ರಜ್ವಲನ ನಡೆಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘ ಇದರ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅವರು ವಹಿಸಲಿದ್ದಾರೆ. ಆಟಿ ಆಚರಣೆಗಳ ಬಗ್ಗೆ ಉಪ್ಪಿನಂಗಡಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಮಾಹಿತಿ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಾದ ಚೆನ್ನೆಮನೆ ಆಟ, ಮಧುರಂಗಿ ಹಚ್ಚುವ ಸ್ಪರ್ಧೆ, ಬುಗರಿ ಬಿಡುವ ಸ್ಪರ್ಧೆ, ಶೋಭಾನೆ ಹಾಡುವುದು, ಛಧ್ಮವೇಷ ಸ್ಪರ್ಧೆಗಳು ನಡೆಯಲಿದೆ. ಆಟಿ ತಿಂಗಳಿನ ತಿಂಡಿಗಳಾದ ಹಲಸಿನ ಹಣ್ಣಿನ ಪಾಯಸ, ನನ್ನೆರಿ, ಬಾಲೆದಿಂಡಿನ ಪಲ್ಯ, ತಿಮರೆ ಚಟ್ನಿ, ಮರಕೆಸು ಪತ್ರೋಡೆ ತಿಂಡಿಗಳ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು