Wednesday, January 22, 2025
ಸುದ್ದಿ

ಆರು ಮನೆಯ ಸಂತ್ರಸ್ಥರನ್ನು ರಕ್ಷಿಸಲು ಹೋದ ಯುವಕರಿಗೆ ಕಾದಿತ್ತು ಅಪಾಯ..! ಅವರನ್ನು ರಕ್ಷಿಸಿದ ಆ ಶಾಸಕ ಯಾರು ಗೊತ್ತಾ..? – ಕಹಳೆ ನ್ಯೂಸ್

ಬೆಳ್ತಂಗಡಿ: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ, ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ನದಿ ತಟದಲ್ಲಿನ ಮನೆ, ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಇನ್ನು ಬೆಳ್ತಂಗಡಿಯ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗುರು ಸಮೀಪದ ಮುಗೇರಡ್ಕ ಎಂಬಲ್ಲಿ ಆರು ಮನೆಗಳು ಮುಳುಗಿ ಅಲ್ಲಿನ ಜನ ಸಂಕಷ್ಟಕ್ಕೆ ಒಳಗಾಗಿದ್ದರು.

ರಾತ್ರಿ ವೇಳೆಯಲ್ಲಿ ಬಂದ ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿತ್ತು. ಈ ವೇಳೆ ರಕ್ಷಣೆಗೆ ಬಂದ ಸ್ಥಳೀಯ ಯುವಕರು ಆರು ಮನೆಯ ಸದಸ್ಯರನ್ನು ರಕ್ಷಿಸಿದ್ದಾರೆ. ಆದರೆ ಜನಜಾನುವಾರುಗಳನ್ನು ರಕ್ಷಿಸಲೆಂದು ಮತ್ತೆ ತೆರಳಿದಾಗ ನೀರು ಜಾಸ್ತಿಯಾಗಿದೆ. ಈ ಯುವಕರ ಬಳಿ ಬೋಟ್ ಇಲ್ಲದ ಕಾರಣ ಅಲ್ಲಿಯೇ ಉಳಿಯುವ ಸಂದಿಗ್ಧ ಪರಿಸ್ಥಿತಿ ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಆತಂಕಗೊಂಡ ಯುವಕರು ಶಾಸಕ ಹರೀಶ್ ಪೂಂಜರಿಗೆ ಫೋನ್ ಮಾಡಿ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಶಾಸಕರು ಯುವಕರ ಕರೆಗೆ ಓಗೊಟ್ಟು ಬೋಟ್ ಸಮೇತ ಬಂದು ಯುವಕರನ್ನು ರಕ್ಷಿಸಿದ್ದಾರೆ. ಹಗಲು ರಾತ್ರಿಯೆನ್ನದೆ ಆಪತ್ಕಾಲದಲ್ಲಿ ನೆರವಾದ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು