Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ 24 ಗಂಟೆ ವ್ಯಾಪಕ ಮಳೆ – ರೆಡ್ ಅಲರ್ಟ್ ಘೋಷಣೆ – ಕಹಳೆ ನ್ಯೂಸ್
ಮಂಗಳೂರು: ಆ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ 24 ಗಂಟೆ ವ್ಯಾಪಕ ಮಳೆಯಾಗುವ ಸಾದ್ಯತೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಮಟ್ಟ 3.5 ರಿಂದ4 ಮೀ ಎತ್ತರವಾಗಿದ್ದು ಮೀನು ಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ದಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಇಂದು ಸಂಜೆ 3 ಗಂಟೆಯವರೆಗಿನ ನೆರೆ ಪರಿಸ್ಥಿತಿ ,ವಿವಿಧ ನದಿಗಳ ಮಟ್ಟದ ಬಗೆಗಿನ ವರದಿಯನ್ನು ಬಿಡುಗಡೆ ಮಾಡಿದೆ.
ಈ ವರದಿಯ ಪ್ರಕಾರ ನೇತ್ರಾವತಿ ಸದ್ಯ ಶಾಂತವಾಗಿರುವಂತೆ ಕಂಡು ಬರುತ್ತಿದೆ. ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ಅಪಾಯದ ಮಟ್ಟಕಿಂತ ಮಿರಿ ಹರಿಯುತ್ತಿದ್ದ ನದಿ ಸದ್ಯ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಬಂಟ್ವಾಳದಲ್ಲಿ ನೇತ್ರಾವತಿಯ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಸದ್ಯದ ಮಟ್ಟ ಅದೇ ಆಗಿದೆ. ನಿನ್ನೆ ತಡರಾತ್ರಿ 10.9 ಮೀಟರ್ ತಲುಪಿತ್ತು. ಉಪ್ಪಿನಂಗಡಿಯಲಿ ನದಿಯ ಅಪಾಯದ ಮಟ್ಟ 31.5ಮೀ ಆಗಿದ್ದು ಸದ್ಯ ಅದು 31.4 ಮೀ ಆಗಿದೆ. ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯ ಅಪಾಯದ ಮಟ್ಟ 26.5ಮೀ ಆಗಿದ್ದು ಸದ್ಯ ಅದು 26 ಮೀ ಆಗಿದೆ.
ಆದರೆ ರಾತ್ರಿಯ ವೇಳೆ ಸಮುದ್ರ ಅಲೆಗಳ ಭರತ ತೀವ್ರವಾಗಿ ಏರುವುದರಿಂದ ಆಗ ನದಿಯು ಸಮುದ್ರ ಸೇರುವಲ್ಲಿ ಅಡಚಣೆ ಉಂಟಾಗಿ ನದಿಯ ಮಟ್ಟ ಏರುವ ಸಾಧ್ಯತೆ ಅತಂಕವಿದೆ. ಹಾಗಾಗಿ ನದಿ ಪಾತ್ರದ ಜನತೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಿದೆ.