Monday, November 25, 2024
ಸುದ್ದಿ

ಉಪ್ಪಿನಂಗಡಿ ಪ್ರವಾಹರಕ್ಷಣಾ ಗೃಹರಕ್ಷಕರಿಂದ ಶ್ವಾನ ರಕ್ಷಣೆ -ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿ ದೇವಾಲಯದ ದಾಖಲೆಗಳು ಹಾಗೂ ದೇವಾಲಯದ ಸುತ್ತಲಿನ ಪರಿಸರದ ಜನರನ್ನು ಶುಕ್ರವಾರ ಸಂಜೆಯಿಂದ ರಾತ್ರಿ ಸುಮಾರು 1 ಗಂಟೆಯ ವರೆಗೆ ಪ್ರವಾಹರಕ್ಷಣಾ ಗೃಹರಕ್ಷಕರು ಸ್ಥಳಾಂತರಿಸಿದರು.
ದೇವಾಲಯದ ಬಳಿ ನೀರಿನ ಮಟ್ಟ ಹೆಚ್ಚಳವಾದ್ದರಿಂದ ದೇವಾಲಯದ ಬಳಿ ಮೂಕ ಪ್ರಾಣಿ ನಾಯಿಯೊಂದು ಕೂಗುತ್ತಾ ಕುಳಿತ್ತಿತ್ತು. ಈ ವೇಳೆಗೆ ಸ್ಥಳಕ್ಕೆ ತೆರಳಿದ ಗೃಹರಕ್ಷಕರು ಅದನ್ನು ಗೃಹರಕ್ಷಕದಳದ ರಬ್ಬರ್ ಬೊಟ್‍ಲ್ಲಿ ತಂದು ಪಂಚಾಯತ್ ಸಮೀಪ ಬಿಟ್ಟಿದ್ದಾರೆ. ಪ್ರವಾಹರಕ್ಷಣಾ ಕಾರ್ಯದಲ್ಲಿ ಗೃಹರಕ್ಷರಾದ ದಿನೇಶ್, ಜನಾರ್ದನ ಆಚಾರ್ಯ, ಅಣ್ಣು, ಸೊಮನಾಥ, ವಸಂತ, ಸಮದ್, ನಿಖಿಲ್ ರಾಜ್, ಸ್ಥಳಿಯ ಸಾರ್ವಜನಿಕರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು