ಮೂರು ಬಾರಿ ತಲಾಕ್ ಹೇಳಿದ ಒಬ್ಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಜಾದ್ ಮಾರುಕಟ್ಟೆ ಪ್ರದೇಶದ ಅತೀರ್ ಶಮೀಮ್ ಬಂಧನಕ್ಕೆ ಒಳಗಾಗಿದ್ದಾನೆ. ಉತ್ತರ ದೆಹಲಿಯ ಬಾರಾ ಹಿಂದೂರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಮೀಮ್, 2011ರಲ್ಲಿ 29 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಜೂನ್ 23 ರಂದು ಶಮೀಮ್ ಮೂರು ಬಾರಿ ತಲಾಕ್ ಹೇಳಿದ್ದ. ಅಲ್ಲದೇ ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿದ್ದ. ಇದರಲ್ಲಿ ಮೂರು ಬಾರಿ ತಲಾಕ್ ಅಂಥ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯ ರಕ್ಷಣೆ ಕಾಯ್ದೆ ಅಡಿ ಆತನನ್ನು ಬಂಧಿಸಲಾಗಿದೆ. ಕಳೆದ ವಾರವಷ್ಟೇ ಮುಸ್ಲಿಂ ಮಹಿಳೆಯರ ಮೇಲಿನ ಶೋಷಣೆ ತಡೆಯುವ ಉದ್ದೇಶದೊಂದಿಗೆ ತಲಾಕ್ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು.