Recent Posts

Monday, November 25, 2024
ಸುದ್ದಿ

ಭಾರೀ ಮಳೆ ಮತ್ತು ಭೂಕುಸಿತದಿಂದ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 70 – ಕಹಳೆ ನ್ಯೂಸ್

ತಿರುವನಂತಪುರಂ: ಭಾರೀ ಮಳೆ ಮತ್ತು ಭೂಕುಸಿತದಿಂದ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 70ಕ್ಕೇರಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಕವಳಪ್ಪಾರದಲ್ಲಿ ಇಲ್ಲಿಯವರೆಗೆ 11 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ವಯನಾಡ್ ಪುತ್ತುಮಲೆಯಲ್ಲಿ ಇಲ್ಲಿಯವರೆಗೆ 10 ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ.

ಇದೀಗ ಮಳೆ ತಗ್ಗಿರುವುದರಿಂದ ಕಣ್ಮರೆಯಾದ ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕವಳಪ್ಪಾರದಲ್ಲಿ ಏಳು ವಯಸ್ಸಿನ ಬಾಲಕಿ ಅಲೀನಾಳ ಮೃತದೇಹ ಪತ್ತೆಯಾಗಿದೆ. ನಿನ್ನೆ 9 ಮಂದಿಯ ಮೃತದೇಹ ಪತ್ತೆಯಾಗಿದ್ದು, ಭಾನುವಾರ ಮೂರು ಮೃತದೇಹಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲಪ್ಪುರಂ ಕೋಟ್ಟುಕುನ್ನಿಲ್ ಕಣ್ಮರೆಯಾಗಿದ್ದ ನಾಲ್ವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಯನಾಡ್ ಪುತ್ತುಮಲೆಯಲ್ಲ ಭಾನುವಾರ ಬೆಳಗ್ಗೆ ಒಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ. ನಾಲ್ಕು ದಿನಗಳಿಂದ ವಾಣಿಯಂಬುಳ ಎಸ್ಟೇಟ್ ಮತ್ತು ನಾಲ್ಕು ಆದಿವಾಸಿ ಹಾಡಿಗಳಲ್ಲಿ 200ಕ್ಕಿಂತಲೂ ಹೆಚ್ಚು ಜನ ಸಿಲುಕಿದ್ದರು. ಎರಡು ದಿನಗಳಿಂದ ಇವರಿಗೆ ಆಹಾರ, ನೀರು ಸಿಗಲಿಲ್ಲ. ಮುಂಡೇರಿ ವಾಣಿಯಂಬುಳದಲ್ಲಿರುವ ಆದಿವಾಸಿ ಕಾಲನಿಯಲ್ಲಿ ಸಿಲುಕಿಕೊಂಡಿದ್ದ 200 ಆದಿವಾಸಿಗಳಿಗೆ ಸೇನೆ ಹೆಲಿಕಾಪ್ಟರ್ ಮೂಲಕ ಆಹಾರ ಒದಗಿಸಿದೆ. ಈ ಮಧ್ಯೆ ಆದಿವಾಸಿ ಕಾಲನಿಯ ಆರು ಮಂದಿ ಮಳೆ ನೀರಲ್ಲಿ ಈಜಿ ಮುಂಡೇರಿಗೆ ತಲುಪಿದ್ದಾರೆ.

ಕುಂಬಳಪ್ಪಾರ ಆದಿವಾಸಿ ಕಾಲನಿಯಲ್ಲಿ 14 ಮನೆಗಳು ನಾಶವಾಗಿವೆ. ಇಲ್ಲಿ ಸೇನಾಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ನಿಲಂಬೂರ್ ಸೌತ್ ಡಿಎಫ್‍ಒ ಸಜಿ ಕುಮಾರ್, ನಾರ್ತ್ ಡಿಎಫ್‌ಒ ಯೋಗೇಶ್ ಅವರ ಜತೆ 25 ಸದಸ್ಯರ ತಂಡ ವಾಣಿಯಂಬುಳ ತಲುಪಿತ್ತು.