ನೆರೆ ಪೀಡಿತ ಪ್ರದೇಶಗಳಿಗೆ ನಮ್ಮ ನೆರವು ; ನೆರೆ ಸಂತ್ರಸ್ತರಿಗೆ ನೆರವು ನೀಡಲು ಮುಂದಾದ ಪುತ್ತೂರಿನ ಎಬಿವಿಪಿ – ಕಹಳೆ ನ್ಯೂಸ್
ನಾಳೆ 12-08-2019 ಹಾಗೂ 13-08-2019 ರಂದು ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ದಿನಪಯೋಗಿ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಲಿದ್ದೇವೆ. ಈ ಪ್ರಕ್ರಿಯೆಯಲ್ಲಿ ಪುತ್ತೂರಿನ ಎಲ್ಲಾ ಸಾರ್ವಜನಿಕರು,ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಂಘಟನೆಯ ಕಾರ್ಯಕರ್ತರು ಜಾತಿ,ಮತ,ಬೇಧ ಮರೆತು ಭಾಗವಹಿಸಬೇಕು.
*ಬೇಕಾಗಿರುವ ವಸ್ತುಗಳು:*
*ಧನಸಹಾಯ*(ಕೈಲಾದಷ್ಟು)
*ಬಟ್ಟೆಬರೆಗಳು*(ಮಕ್ಕಳಿಗೆ,ಮಹಿಳೆಯರಿಗೆ,ಗಂಡಸರಿಗೆ)
*ಪಾದರಕ್ಷೆಗಳು*(ಮಕ್ಕಳಿಗೆ, ಮಹಿಳೆಯರಿಗೆ,ಗಂಡಸರಿಗೆ)
*ಸೋಪು, ಪೇಸ್ಬ್ ,ಬಟ್ಟಲು*(ಹಾಳೆತಟ್ಟೆ,ಗ್ಲಾಸ್)
*ರೆಡಿಮೇಡ್ ಆಹಾರಗಳು*(ಬಿಸ್ಕತ್ತು, ರಸ್ಕ್,ಬ್ರೆಡ್ ಇತ್ಯಾದಿ ವಸ್ತುಗಳು)
ಕರವಸ್ತ್ರ,ಹೊದಿಕೆ,ಚಾಪೆ ಇತ್ಯಾದಿ
ತುರ್ತು ಚಿಕತ್ಸೆಗೆ ಔಷಥಿ
ಕಳೆದ ಬಾರಿ ಕೊಡಗು ಮತ್ತು ಕೇರಳದ ಪ್ರವಾಹದಲ್ಲಿ ನಾಶ ನಷ್ಟವಾಗಿದ್ದ ಜನತೆಗೆ ತುರ್ತು ಸಹಾಯ ಮತ್ತು ಅಗತ್ಯ ಸಾಮಾಗ್ರಿಗಳನ್ನ ಸಂಗ್ರಹಿಸಿ ತಲುಪಿಸುವ ಕೆಲಸವನ್ನ ಬಹಳ ಯಶಸ್ವಿಯಾಗಿ ಮಾಡಿದ್ದೇವೆ.ಕೇವಲ ಗಂಟೆಗಳ ಕಾಲಾವಕಾಶದಲ್ಲಿ ಪಾರದರ್ಶಕವಾಗಿ ಸಂಗ್ರಹಿಸಿ ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಕೊಟ್ಟಿದ್ದೇವೆ.ಈ ಬಾರಿಯೂ ನಿಮ್ಮ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
ಸ್ಥಳ:ವಿವೇಕಾನಂದ ಕಾಲೇಜಿನ ಮುಖ್ಯದ್ವಾರದ ಬಳಿಯಿರುವ ಕೇಶವ ಸಂಕಲ್ಪ ಸಭಾಭವನ.
ವಿಶೇಷ ಸೂಚನೆ:ಸಂಗ್ರಹವಾದ ಒಟ್ಟು ಹಣದಿಂದ ಬೇಕಾಗಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸಲಿದ್ದೇವೆ.