ಚಾರ್ಮಾಡಿ ಘಾಟಿ: ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಹಾ ಮಳೆಯಿಂದಾಗಿ ಅಸ್ತವ್ಯಸ್ಥ – ಕಹಳೆ ನ್ಯೂಸ್
ಚಿಕ್ಕಮಗಳೂರು : ಚಾರ್ಮಾಡಿ ಘಾಟಿ, ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಒಂದು. ಇಂತಹ ರಸ್ತೆ ಮಹಾ ಮಳೆಯಿಂದಾಗಿ ಎಲ್ಲೆಲ್ಲೂ ಗುಡ್ಡ ಕುಸಿತಗೊಂಡ ಪರಿಣಾಮ, ರಸ್ತೆಯಲ್ಲೆಲ್ಲಾ ಗುಡ್ಡದ ಮಣ್ಣು ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ಮೂಲಕ ಚಾರ್ಮಾಡಿ ಘಾಟಿ ರಸ್ತೆಯ ಸಂಚಾರ ಪ್ರಯಾಣಕ್ಕೆ ಸದ್ಯಕ್ಕೆ ಸಿಗೋದು ಕಷ್ಟ ಎನಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ರಸ್ತೆ ಸಂಚಾರ, ನಿಜಕ್ಕೂ ಇದೀಗ ದುರ್ಲಬವಾಗಿದೆ. ಮಹಾ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಬೆಟ್ಟ ಕುಸಿತಗೊಂಡ ಪರಿಣಾಮ ರಸ್ತೆಯಲ್ಲೆಲ್ಲಾ ಮಣ್ಣು ಮುಚ್ಚಿ ಹೋಗಿವೆ. ಅಲ್ಲಲ್ಲಿ ಬೆಟ್ಟ ನೀರು ಹರಿದ ಪರಿಣಾಮ, ರಸ್ತೆಯೇ ಇರುವ ಗುರುತೇ ಇಲ್ಲದಂತೆ ಆಗಿದೆ. ರಸ್ತೆಯಲ್ಲೆಲ್ಲಾ ಮಣ್ಣು, ಕಲ್ಲುಗಳ ಮೂಲಕ ತುಂಬಿ ಹೋಗಿದೆ. ಅಲ್ಲದೇ ಅಲ್ಲಲ್ಲಿ ಮರಗಳು ಸಹ ಮುರಿದು ಬಿದ್ದಿರುವುದರಿಂದ ರಸ್ತೆಯಲ್ಲೆಲ್ಲಾ ಮಣ್ಣು, ಕಲ್ಲು, ಮರಗಳ ಬಿದ್ದಿರುವುದು ಕಂಡು ಬರುತ್ತಿದೆ. ಈ ಮೂಲಕ ಮಳೆ ಬಿಟ್ಟರೂ ಚಾರ್ಮಾಡಿ ರಸ್ತೆ ಸರಿ ಹೋಗಲು ಎಷ್ಟು ದಿನ ಬೇಕೋ ಎಂಬ ಉದ್ಗಾರಕ್ಕೆ ಕಾರಣವಾಗಿದೆ.