Sunday, November 24, 2024
ಸುದ್ದಿ

ಇಂದು ನಾಳೆ ಭಾರೀ ಮಳೆ: ಕರಾವಳಿ, ಮಲೆನಾಡಿನಲ್ಲಿ ಹೈ ಅಲರ್ಟ್- ಕಹಳೆ ನ್ಯೂಸ್

ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರಾಜ್ಯ ತತ್ತರಿಸಿ ಹೋಗಿದೆ. ಹೀಗಿರುವಾಗ ಮತ್ತೆ ಭಾರಿ ಮಳೆ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಸುರಿಯಲಿದೆ. ಹೀಗಾಗಿ ಹೈ ಅಲರ್ಟ್ ಆಗಿ ಇರುವಂತೆ ಹವಾಮಾನ ಇಲಾಖೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಮಹಾಮಳೆಗೆ ರಾಜ್ಯದಲ್ಲಿ ಬಹುದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದ ಪರಿಣಾಮ, ರಾಜ್ಯದ ಅನೇಕ ಡ್ಯಾಂಗಳು ತುಂಬಿ ತುಳುಕುತ್ತಿವೆ. ಹೀಗಾಗಿ ಹೆಚ್ಚುವರಿ ನೀರನ್ನು ಡ್ಯಾಂ ನಿಂದ ಹೊರ ಬಿಟ್ಟ ಪರಿಣಾಮ, ನದಿ ಪಾತ್ರದ ಗ್ರಾಮಗಳು ಮುಳುಗಡೆ ಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಸಂದರ್ಭದಲ್ಲಿ ಇರುವಾಗ, ಮತ್ತೆ ರಾಜ್ಯದಲ್ಲಿ ಭಾರಿ ಮಳೆ ಸುರಿಯಲಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮೂಲಕ ಹೈ ಅಲರ್ಟ್ ಆಗಿರುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಈ ಹಿನ್ನಲೆಯಲ್ಲಿ ಮತ್ತೆ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಸುರಿಯುವ ಕಾರಣ, ಹವಾಮಾನ ಇಲಾಖೆಯ ಮುನ್ಸೂಚನೆಯಿಂದಾಗಿ, ಕರಾವಳಿ ಮತ್ತು ಮಲೆನಾಡಿದ ಭಾಗಗಳ ಜಿಲ್ಲಾಡಳಿತ ಸಜ್ಜುಗೊಂಡಿದೆ. ಈಗಾಗಲೇ ಆಗಿರುವ ಮಳೆಯ ಅವಾಂತರದಿಂದಾಗಿ ಸಮರ್ಪಕ ರಕ್ಷಣಾ ಕಾರ್ಯದಲ್ಲಿ ನಿರತವಾಗಿರುವ ಜಿಲ್ಲಾಡಳಿತ, ಇದೀಗ ಇಂದು ನಾಳೆ ಸುರಿಯಲಿರುವ ಭಾರಿ ಮಳೆಯ ಅವಾಂತರವನ್ನು ಸೃಷ್ಠಿಸಿದರೇ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳನ್ನು ಸಜ್ಜುಗೊಳಿಸಿದೆ.