Sunday, November 24, 2024
ಸುದ್ದಿ

ಐತಿಹಾಸಿಕ ಬೇಕಲ ಕೋಟೆಯ ಹೊರಭಾಗದ ಗೋಡೆ ಕುಸಿತ -ಕಹಳೆ ನ್ಯೂಸ್

ಕಾಸರಗೋಡು: ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಕಾಸರಗೋಡಿನ ಬೇಕಲ ಕೋಟೆಯ ವೀಕ್ಷಣಾ ಸ್ಥಳದ ಹೊರಭಾಗದ ಗೋಡೆ ಕುಸಿದು ಬಿದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐತಿಹಾಸಿಕ ಬೇಕಲ ಕೋಟೆಯ ಪೂರ್ವ ಭಾಗದಲ್ಲಿನ ವೀಕ್ಷಣಾ ಸ್ಥಳದ ಹೊರಭಾಗದ ಇಟ್ಟಿಗೆಗಳು ಕುಸಿದುಬಿದ್ದಿರುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. ಈ ಘಟನೆಯ ನಂತರ ಇದೀಗ ಬೇಕಲ ಕೋಟೆಯಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಸ್ಥಳಕ್ಕೆ ತೆರಳುವುದನ್ನು ನಿಬರ್ಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿಯೇ ಅತೀ ದೊಡ್ಡ ಕೋಟೆಯಾಗಿದ್ದು, ಇದನ್ನು 1650ರಲ್ಲಿ ತುಂಡರಸ ಶಿವಪ್ಪ ನಾಯಕ ಕಟ್ಟಿಸಿದ್ದರು. ಬೇಕಲ ಕೋಟೆ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ಹಲವಾರು ಸಿನಿಮಾ ಚಿತ್ರೀಕರಣ ನಡೆದಿತ್ತು.