Monday, November 18, 2024
ಸುದ್ದಿ

ಸಚಿವ ರಮಾನಾಥ ರೈ ಮಹಿಷಾಸುರ – ಹರಿಕೃಷ್ಣ ಬಂಟ್ವಾಳ್

 

ಮಂಗಳೂರು : ಬಿಜೆಪಿ ಪಕ್ಷ ತಮ್ಮ ಪ್ರಚಾರದ ವೇದಿಕೆಯಲ್ಲಿ ಕೋಟಿ ಚೆನ್ನಯ ಚಿತ್ರವನ್ನು ಬಳಸಿಕೊಂಡು ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ,ಎನ್ನುವ ಸಚಿವ ರೈ ಆರೋಪಕ್ಕೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತಿರುಗೇಟು ನೀಡಿದ್ದಾರೆ. ಅವರು ನಗರದ ಬಿಜೆಪಿ ಕಚೇರಿಯಲ್ಲಿ ಜ 17 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ,ಇತ್ತೀಚೆಗೆ ಬಂಟ್ವಾಳಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಕಾಂಗ್ರೆಸ್ ಪಕ್ಷದ ಸಮಾವೇಶದ ಬ್ಯಾನರ್ ಗಳಲ್ಲಿ, ಸಿದ್ದರಾಮಯ್ಯ , ರೈಯ ಭಾವ ಚಿತ್ರಗಳ ಜತೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿತ್ರವನ್ನು ಬಳಸಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಕೋಟಿ – ಚೆನ್ನಯರ ತವರೂರು, ಈ ಹಿನ್ನಲೆಯಲ್ಲಿ ಭಕ್ತಿ ಮತ್ತು ಗೌರವ ನೀಡುವ ನಿಟ್ಟಿನಲ್ಲಿ ಕೋಟಿ-ಚೆನ್ನಯರ ಚಿತ್ರ ಬಳಕೆ ಮಾಡಿದ್ದೇವೆ. ಈ ಹಿಂದೆಯೂ ಇದಕ್ಕೆ ಸ್ಪಷ್ಟೀಕರಣ ನೀಡಿದ್ದೇವೆ. ಕಾಂಗ್ರೆಸ್ಸಿಗರೇ ನಾವು ಮಾಡಿದ್ದು ತಪ್ಪಾದರೆ, ನೀವು ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿತ್ರವನ್ನು ಬಳಸಿದ್ದು ಸರಿಯೇ ಎಂದು ಕಿಡಿಕಾರಿದರು. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಕಾಣುತ್ತದೆ. ಆದ್ದರಿಂದ ನೀವು ಮಾಡಿದ ತಪ್ಪು ಕಾಂಗ್ರೆಸ್ ಕನ್ನಡಕ ಧರಿಸಿ ನೋಡುವಾಗ ಕಾಣದಿದ್ದರೆ, ಬಿಜೆಪಿ ಕನ್ನಡಕ ಧರಿಸಿ ನೋಡಿ ಎಂದು ವ್ಯಂಗ್ಯವಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಡುಮಲೆಯ ಔಷದಿವನದಲ್ಲಿರುವ ದೇಯಿ ಬೈದೆತಿ ಪುತ್ಥಳಿಗೆ ಅವಮಾನ ಮಾಡಿದಾಗ, ಅದು ಪೂಜಿಸುವ ಮೂರ್ತಿಯಲ್ಲ ಎಂಬ ಹೇಳಿಕೆ ನೀಡಿದ ಸಚಿವ ರಮಾನಾಥ ರೈ ಅವರಿಗೆ, ಬಿಲ್ಲವರ ಪರ ಮಾತನಾಡುವ ಯಾವ ನೈತಿಕೆಯೂ ಇಲ್ಲ. ಬಿಲ್ಲವರ ಮೇಲೆ ಈ ಹಿಂದೆ ಇಲ್ಲದ ಪ್ರೀತಿ ಈಗ್ಯಾಕೆ ಎಂದು ಪ್ರಶ್ನಿಸಿದರು. ಮರದ ದಂದೆ, ಮರಳು ಮಾಫಿಯ, ಡ್ರಗ್ಸ್ ಮಾಫಿಯಾ ಉಸ್ತುವರಿ ಸಚಿವರು ರೈಗಳು .ತಾಕದಿದ್ದರೆ ಮುಸ್ಲಿಂರ ಋಣ ನನ್ನ ಮೇಲೆ ಇದೆ ಎನ್ನುವ ಸಚಿವರು, ತಮ್ಮ ಸ್ಥಾನವನ್ನು ಈ ಸಾರಿ ಚುನಾವಣೆಯಲ್ಲಿ ಮುಸ್ಲಿಂರಿಗೆ ಬಿಟ್ಟುಕೊಡಲಿ. ದಕ್ಷಿಣ ಕನ್ನಡ ದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುವ ರೈಗಳು ಈ ವರ್ಷದ ಕೊನೆಯ ಬಯಲಾಟ ಆಡಲಿದ್ದು ಸಚಿವ ರೈಗಳದ್ದು ಮಹಿಷಾಸುರ ಪಾತ್ರ ಎಂದರು ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಟಿಯಲ್ಲಿ ಜಿತೇಂದ್ರ ಕೊಟ್ಟಾರಿ, ಸಂಜಯ್ ಪ್ರಭು , ಮತ್ತಿತ್ತರರು ಉಪಸ್ಥಿತರಿದ್ದರು.

Leave a Response