Monday, January 20, 2025
ಸುದ್ದಿ

ಬಂಟ್ವಾಳದ ನೆರೆಪೀಡಿತ ಪ್ರದೇಶಗಳಿಗೆ ಶಾಸಕರಿಂದ ಮುಖ್ಯಮಂತ್ರಿಗೆ 30 ಕೋಟಿ ರೂ. ಪರಿಹಾರ ಮೊತ್ತ ಬೇಡಿಕೆ ಸಲ್ಲಿಕೆ – ಕಹಳೆ ನ್ಯೂಸ್

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಬಂಟ್ವಾಳಕ್ಕೆ ಭೇಟಿ ನೀಡಿದ್ದರು. ಪಾಕೃತಿಕ ವಿಕೋಪದಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಲು ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ವಾಪಾಸು ಬರುವಾಗ ಬಂಟ್ವಾಳಕ್ಕೆ ಭೇಟಿ ನೀಡಿದರು.

ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಸಂಪೂರ್ಣ ಮಾಹಿತಿಯನ್ನೊಳಗೊಂಡ ಮನವಿ ಹಾಗೂ 30 ಕೋಟಿ ರೂಗಳನ್ನು ಪರಿಹಾರ ನೀಡುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿದ ಸಿ.ಎಂ. ಪಾಕೃತಿಕ ಹಾನಿಗೆ ನೀಡುತ್ತಿದ್ದ 95 ಸಾವಿರ ರೂಗಳನ್ನು ಈ ಬಾರಿ 5 ಲಕ್ಷ ರೂ ನೀಡುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೆರೆಯಿಂದ ಮುಳುಗಡೆಯಾದ ಅಂಗಡಿಗಳಿಗೆ ರೂ 5 ಸಾವಿರ ನೀಡುತ್ತೇವೆ, ಮನೆ ರಿಪೇರಿ ಮಾಡಲು 1 ಲಕ್ಷ ರೂ ನೀಡುತ್ತೇವೆ. ನೆರೆಯಿಂದ ಸಂಪೂರ್ಣ ಹಾನಿಯಾದ ಮನೆಗಳ ಕುಟುಂಬ ಹೊಸಮನೆ ನಿರ್ಮಾಣದವರೆಗೆ ಅವರ ಮನೆಯ ಬಾಡಿಗೆ ತಿಂಗಳಿಗೆ ರೂ5 ಸಾವಿರ ನೀಡುತ್ತೇವೆ ಎಂದ ಅವರು ಯಾವುದೇ ರೀತಿಯ ಭಯ ಬೇಡ ನಿಮ್ಮ ಜೊತೆ ಸರಕಾರ ಇದೆ ಎಂದು ಅಭಯ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಎಂ.ಎಲ್.ಸಿ.ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ವೇದವ್ಯಾಸ ಕಾಮತ್ ಪ್ರಮುಖರಾದ ದೇವದಾಸ ಶೆಟ್ಟಿ, ಎಂ.ತುಂಗಪ್ಪ ಬಂಗೇರ, ಮಾಜಿ ಶಾಸಕ ರುಕ್ಮಯ ಪೂಜಾರಿ, ಎ.ಗೋವಿಂದ ಪ್ರಭು, ದಿನೇಶ್ ಅಮ್ಟೂರು, ಉದಯಕುಮಾರ್ ರಾವ್, ದಿನೇಶ್ ಭಂಡಾರಿ, ಮೋನಪ್ಪ ದೇವಶ್ಯ, ರಾಮ್ ದಾಸ ಬಂಟ್ವಾಳ, ರೋನಾಲ್ಡ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು