Recent Posts

Monday, January 20, 2025
ಕ್ರೀಡೆ

ಭಾರತ ಕ್ರಿಕೆಟ್ ತಂಡದ ಕೋಚ್: ಅಂತಿಮ ರೇಸ್‍ನಲ್ಲಿ ಆರು ಮಂದಿ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಆರು ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ನ್ಯೂಝಿಲೆಂಡ್‍ನ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮ್ ಮೂಡಿ, ವೆಸ್ಟ್ಇಂಡೀಸ್‍ನ ಮಾಜಿ ಆಲ್‍ರೌಂಡರ್ ಹಾಗೂ ಅಪ್ಘಾನಿಸ್ತಾನ ಕೋಚ್ ಫಿಲ್ ಸಿಮನ್ಸ್, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‍ಚಂದ್ ರಜಪೂತ್, ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ರೇಸ್‍ನಲ್ಲಿರುವ ಇತರ ಐವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಮುಂದೆ ಈ ಆರು ಮಂದಿ ತಮ್ಮ ಪ್ರಸ್ತುತಿಯನ್ನು ನೀಡಬೇಕಾಗುತ್ತದೆ. ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಕೋಚ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಕಪಿಲ್‍ದೇವ್ ಜತೆಗೆ ಅಂಶುಮಾನ್ ಗಾಯಕ್‍ವಾಡ್ ಹಾಗೂ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೂಡಾ ಸಲಹಾ ಸಮಿತಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಈ ಆರು ಮಂದಿ ಮುಖ್ಯ ಕೋಚ್ ಹುದ್ದೆಗಾಗಿ ತಮ್ಮ ಪ್ರಸ್ತುತಿಯನ್ನು ಸಿಎಸಿ ಮುಂದೆ ನೀಡಿ, ಸಂದರ್ಶನಕ್ಕೂ ಹಾಜರಾಗಬೇಕಾಗುತ್ತದೆ” ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.